ಸರಳವಾಗಿ ‘ಶಿಕ್ಷಕರ ದಿನ’ ಆಚರಣೆಗೆ ಸರ್ಕಾರದಿಂದ ಸುತ್ತೋಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.27- ಕೋವಿಡ್-19 ಹಿನ್ನೆಲೆ ಸೆಪ್ಟೆಂಬರ್ 5ರ ಶಿಕ್ಷಕರ ದಿನವನ್ನು ಸರಳವಾಗಿ ಆಚರಿಸಲು ಸುತ್ತೋಲೆ ಹೊರಡಿಸಲಾಗಿದೆ. ಕಾರ್ಯಕ್ರಮದ ವೇದಿಕೆ ಮೇಲೆ ಹಾಗೂ ಮುಂಭಾಗದಲ್ಲಿ ಇಂತಿಷ್ಟೇ ಜನರಿರಬೇಕೆಂಬ ನಿಯಮ ಕೂಡ ಹೇರಲಾಗಿದೆ.

ಕಾರ್ಯಕ್ರಮಕ್ಕೆ 50 ಜನರನ್ನು ಮಾತ್ರ ಆಹ್ವಾನಿಸಿ, ನಿಗದಿತ ಅವಯೊಳಗೆ ಮುಗಿಸಲು ಸೂಚನೆ ಹೊರಡಿಸಲಾಗಿದೆ. ಸೆಪ್ಟಂಬರ್ 5ನೇ ತಾರೀಖಿಗೆ ಶಿಕ್ಷಕರ ದಿನಾಚರಣೆ ಆಚರಿಸಬೇಕು. ಆದರೆ ಮಕ್ಕಳು ಭಾಗವಹಿಸುವಂತಿಲ್ಲ ಎಂದು ತಿಳಿಸಲಾಗಿದೆ.

ಸಾಮಾಜಿಕ ಅಂತರ ಕಡ್ಡಾಯ ಪಾಲನೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿದೆ. ಶುದ್ಧ ಕುಡಿಯುವ ನೀರು ಹೊರತುಪಡಿಸಿ, ಲಘು ಉಪಹಾರ, ಊಟ ಆಯೋಜಿಸುವಂತಿಲ್ಲ ಎಂದು ತಿಳಿಸಲಾಗಿದೆ.

# ಶಿಕ್ಷಕ ಮಿತ್ರ ಆ್ಯಪ್ ಬಿಡುಗಡೆ:
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಶಿಕ್ಷಕರ ಅನುಕೂಲಕ್ಕಾಗಿ ಶಿಕ್ಷಕ ಮಿತ್ರ ಆ್ಯಪ್ ರಚಿಸಲಾಗಿದ್ದು, ನಾಳೆ ಶುಕ್ರವಾರ ಸಿಎಂ ಲೋಕಾರ್ಪಣೆ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕುರಿತ ವಿಮರ್ಶಾ ಬರಹಗಳ ಸಂಕಲನ ವಿದ್ಯಾ ವಿನೀತ ಪುಸ್ತಕ ಮತ್ತು ಶಿಕ್ಷಣ ಸಚಿವರು ಬರೆದ ಅಂಕಣ ಲೇಖನಗಳ ಸಂಗ್ರಹ ಶಿಕ್ಷಣ ಯಾತ್ರೆ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಬಳಿಕ ಕೆಂಪೇಗೌಡ ರಸ್ತೆಯ ಶಿಕ್ಷಕರ ಸದನದ ಶಿಕ್ಷಕರ ಕಲ್ಯಾಣ ನಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಕುಂದುಕೊರತೆ ನಿವಾರಣೆಗೆ ಸಾರ್ವಜನಿಕರು ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಚಿಸಲಾದ ಸಹಾಯವಾಣಿ ಶಿಕ್ಷಣ ವಾಣಿ ಕೇಂದ್ರಕ್ಕೆ ಪ್ರಾಥಮಿಕ ಶಿಕ್ಷಣ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

Facebook Comments

Sri Raghav

Admin