ವಲಸೆ ಕುಟುಂಬಗಳ ಮಕ್ಕಳ ಮನೆಗೆ ತೆರಳಿ ಶಿಕ್ಷಕರಿಂದ ನಿತ್ಯಪಾಠ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.5- ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‍ಟಿಇ) ವಿವಿಧ ಶಾಲೆಗಳಲ್ಲಿ ಕಲಿಯುತ್ತಿದ್ದ ವಲಸೆ ಕುಟುಂಬಗಳ ಮಕ್ಕಳಿಗೆ ಕೊರೊನಾ ಹಿನ್ನೆಲೆಯಲ್ಲಿ ಅವರಿದ್ದಲ್ಲಿಗೆ ತೆರಳಿ ಇಬ್ಬರು ಶಿಕ್ಷಕರಿಂದ ನಿತ್ಯಪಾಠ ನಡೆಯುತ್ತಿದೆ.

ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದಿದ್ದ ಕುಟುಂಬಗಳು ಜೀವನೋಪಾಯಕ್ಕಾಗಿ ಸಿಗ್ನಲ್‍ಗಳಲ್ಲ ಬಲೂನ್ ಮಾಡುವುದು, ಭಿಕ್ಷೆ ಬೇಡುವ ಕೆಲಸ ಮಾಡಿಕೊಂಡಿದ್ದ ಈ ಕುಟುಂಬಗಳಲ್ಲಿದ್ದ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ನಾಗರತ ಅವರು ಶಾಲೆಗಳಿಗೆ ಸೇರಿಸಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿದ್ದರು.

ವಿಜಯನಗರದ ಟೊಲ್‍ಗೇಟ ಬಳಿಯ ರಸ್ತೆ ಅಕ್ಕಪಕ್ಕಗಳಲ್ಲೇ ವಾಸ್ತವ್ಯ ಹೂಡಿದ್ದ ಕುಟುಂಬಗಳ ಬಗ್ಗೆ ಕಾಳಜಿ ತೋರಿ 2013ರಲ್ಲಿ ನಡೆದ ಕ್ಷೇತ್ರ ಸಮೀಕ್ಷೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ 40 ಮಕ್ಕಳನ್ನೂ ಶಾಲೆಗೆ ಸೇರಿಸಲಾಯಿತು.

ಅಂದಿನಿಂದ ಉತ್ತಮವಾಗಿ ಆಸಕ್ತಿಯಿಂದಲೇ ಕಲಿಯುತ್ತಿರುವ ಮಕ್ಕಳಿಗೆ ಈ ಕೊರೊನಾ ಸಂದರ್ಭದಲ್ಲಿ ಪಾಠ ಕಲಿಸುವ ಪ್ರಕ್ರಿಯೆ ಮುಂದುವರೆದಿದೆ.
ಒಟ್ಟು 40 ಮಕ್ಕಳಲ್ಲಿ 10 ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ.

ಉಳಿದ 30 ಮಕ್ಕಳು ಆರ್‍ಟಿಇ ಪೂರ್ಣಗೊಂಡು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ನಾಗರತ್ನ ಅವರು ಮಾಹಿತಿ ನೀಡಿದ್ದಾರೆ.

ಈ ಮಕ್ಕಳ ಊಟದ ಸಮಸ್ಯೆನೀಗಿಸಲು ಶಾಸಕ ಎಂ.ಕೃಷ್ಣಪ್ಪ ವ್ಯವಸ್ಥೆ ಮಾಡಿದರು ಜೊತೆಗೆ ಹೆಲ್ಪ್ ಟು ಎಜುಕೇಷನ್‍ನಂತಹ ಸಂಸ್ಥೆ ಯೂ ಕೈ ಜೋಡಿಸಿದ್ದರಿಂದ ಈ ಮಕ್ಕಳ ಕುಟುಂಬಗಳಿಗೆ ಹೊಸಹಳ್ಳಿ ಸರ್ಕಾರಿ ಶಾಲೆ ಬಳಿಯ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಮಕ್ಕಳು ಇರುವಲ್ಲಿಯೇ ತೆರಳಿ ನಿತ್ಯ ಶಿಕ್ಷಕರು ಫಾಠ ಕಲಿಸುತ್ತಿರುವುದು ಮಾದರಿಯೇ ಸರಿ.

Facebook Comments

Sri Raghav

Admin