ಟೀಮ್ ಇಂಡೈಯಾಗೆ ಪ್ರಧಾನಿ ಮೋದಿ ಶಹಬಾಷ್‍ಗಿರಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ ಬೆಂಗಳೂರು, ಜ.19- ಆಸ್ಟ್ರೇಲಿಯಾ ತಂಡದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿರುವ ರಹಾನೆ ನಾಯಕತ್ವದ ಭಾರತ ತಂಡದ ಸಾಹಸಕ್ಕೆ ಭಾರತದ ಪ್ರಧಾನಿ ನರೇಂದ್ರಮೋದಿ ಅವರು ಶಹಬಾಷ್‍ಗಿರಿ ಕೊಟ್ಟಿದ್ದಾರೆ.

ಇಂದು ಇಡೀ ಭಾರತವೇ ಹೆಮ್ಮೆ ಪಡುವ ದಿನವಾಗಿದೆ, ಆಸ್ಟ್ರೇಲಿಯಾ ವಿರುದ್ಧದ ಗೆಲುವಿನಿಂದ ನಾನು ಕೂಡ ಖುಷಿಪಟ್ಟಿದ್ದೇನೆ, ಇಡೀ ತಂಡದಲ್ಲಿದ್ದ ಶಕ್ತಿ ಹಾಗೂ ಉತ್ಸಾಹವವು ಜಯವಾಗಿ ಪರಿಣಮಿಸಿದೆ. ಭಾರತ ತಂಡವು ಇದೇ ರೀತಿ ಮುಂದಿನ ದಿನಗಳಲ್ಲಿ ಗೆಲುವು ಸಾಧಿಸಲಿ ಎಂದು ಹಾರೈಸಿದ್ದಾರೆ.  ಇನ್ನು ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಭಾರತ ತಂಡದ ಕೆಚ್ಚೆದೆಯ ಪ್ರದರ್ಶನವನ್ನು ಕೊಂಡಾಡಿದ್ದಾರೆ.

Facebook Comments