ಕೊರೊನಾ `ಟೆಸ್ಟ್’ ಪಾಸ್ ಮಾಡಿದ  ರಹಾನೆ ಹುಡುಗರು

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬರ್ನ್, ಜ.4- ಇತ್ತೀಚೆಗೆ ಹೊಟೇಲ್‍ವೊಂದರಲ್ಲಿ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್ ಸೇರಿದಂತೆ ಐವರು ಆಟಗಾರರು ಅಭಿಮಾನಿಗಳೊಂದಿಗೆ ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಕೊರೊನಾ ಟೆಸ್ಟ್ ಮಾಡಿಸಿದ್ದು ರಹಾನೆ ಹುಡುಗರು ಕೋವಿಡ್ 19 `ಟೆಸ್ಟ್’ ಅನ್ನು ಪಾಸ್ ಮಾಡಿದ್ದಾರೆ.

ಇಂದು ಸಿಡ್ನಿಗೆ ಟೀಂ ಇಂಡಿಯಾ ಹುಡುಗರು ಪಯಣ ಬೆಳೆಸಿದ್ದ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು ರೋಹಿತ್, ಪಂತ್ ಸೇರಿದಂತೆ ಹೊಟೇಲ್‍ನ ಕೂಟವೊಂದರಲ್ಲಿ ಪಾಲ್ಗೊಂಡಿದ್ದ 5 ಮಂದಿ ಆಟಗಾರರಿಗೆ ನೆಗೆಟಿವ್ ವರದಿ ಬಂದಿದ್ದರೂ ಕೂಡ ಅವರನ್ನು ಜನವರಿ 7ರವರೆಗೂ ಪ್ರತ್ಯೇಕವಾಗಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Facebook Comments