ಉತ್ತರಪ್ರದೇಶ : ಏಳು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರಕೂಟ್, ಮಾ.1 (ಪಿಟಿಐ)- ಇಲ್ಲಿನ ರಾಯ್‍ಪುರ ಸಮೀಪದ ಗ್ರಾಮದಲ್ಲಿ ಏಳು ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಹದಿಹರೆಯದ ವಿದ್ಯಾರ್ಥಿ ಅತ್ಯಾಚಾರ ಎಸಗಿದ ಪ್ರಕರಣ ನಡೆದಿದೆ. ನಿನ್ನೆ ಸಂಜೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಅದೇ ಗ್ರಾಮದ 12ನೇ ತರಗತಿ ವಿದ್ಯಾರ್ಥಿ ಪುಸಲಾಯಿಸಿ ಅವನ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆಂದು ರಾಯ್‍ಪುರ ಎಸ್‍ಎಚ್‍ಒ ಸುಶೀಲ್ ಚಂದ್ರ ಶರ್ಮ ತಿಳಿಸಿದ್ದಾರೆ.

ಮನೆಗೆ ವಾಪಸು ಬಂದ ಬಾಲಕಿ ತಮ್ಮ ಕುಟ1ುಂಬದ ಸದಸ್ಯರಲ್ಲಿ ವಿಷಯ ತಿಳಿಸಿದ್ದಾಳೆ. ಅದರ ಆಧಾರದ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.

Facebook Comments