ʼಒಸಡುʼ ನೋವಿಗೆ ಮನೆಯಲ್ಲೇ ಸರಳ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

ಸಾಮಾನ್ಯವಾಗಿ ಹಲ್ಲು ನೋವನ್ನು ಎಲ್ಲರೂ ಅನುಭವಿಸಿರುತ್ತಾರೆ. ಹಲ್ಲು ನೋವು ಅಂದರೆ ಅದು ನರಕಯಾತನೆಯೇ ಸರಿ. ಹಲ್ಲು ನೋವಿಗೆ ಕಾರಣ ಒಂದೇ ಎರಡೇ.. ಕ್ಯಾಲ್ಸಿಯಂ ಕಡಿಮೆ ಆದ್ರೆ. ಅಥವಾ ಹಲ್ಲು ಸರಿಯಾಗಿ ಉಜ್ಜಿಲ್ಲ ಅಂದ್ರೆ ಹಲ್ಲು ನೋವು ಶುರುವಾಗುತ್ತೆ. ತಿಂದ ಆಹಾರ ಹಲ್ಲಿನ ಸಂಧಿಯೊಳಗೆ ಸಿಕ್ಕಿಕೊಂಡರೂ ಅದು ಹಲ್ಲು ನೋವಿಗೆ ಕಾರಣವಾಗುತ್ತೆ.

ದೇಹಕ್ಕೆ ಸರಿಯಾಗಿ ಫ್ಲೋರೈಡ್ ಸಿಗದೇ ಇದ್ದರೆ ದೇಹದಲ್ಲಿ ನೀರಿನಾಂಶ ಕಡಿಮೆ ಆದರೂ ಹಲ್ಲು ನೋವಾಗುತ್ತದೆ. ಈ ಹಲ್ಲು ನೋವು ಬಂದಾಗ ವೈದ್ಯರ ಬಳಿ ಹೋಗೋ ಮುಂಚೆ ಏನೆಲ್ಲಾ ಮನೆಮದ್ದು ಮಾಡಿ ಹಲ್ಲು ನೋವನ್ನು ವಾಸಿ ಮಾಡಿಕೊಳ್ಳಬಹುದು ನೋಡೋಣ..

#ಅರಿಶಿಣ : ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮ ಜೀವಿ ವಿರೋಧಿ ಗುಣವು ಅಧಿಕವಾಗಿದೆ. ಒಂದು ಚಮಚ ಅರಿಶಿಣವನ್ನು ನೀರಿನೊಂದಿಗೆ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ನಿಂದ ಹಲ್ಲುಜ್ಜಿಕೊಳ್ಳಿ. ಪ್ರತಿ ದಿನ ಅರಿಶಿಣದಿಂದ ಹಲ್ಲುಜ್ಜುತ್ತಾ ಇದ್ದರೆ ಸೋಂಕು ರಹಿತ ಬಾಯಿ ನಿಮ್ಮದಾಗುತ್ತದೆ.

#ಉಪ್ಪು ನೀರು: ಒಸಡಿನಲ್ಲಿರುವ ನೋವು ಮತ್ತು ಊತವನ್ನು ಕಡಿಮೆ ಮಾಡಬೇಕಾದರೆ ಉಪ್ಪಿನ ನೀರಿನಿಂದ ಬಾಯಿ ತೊಳೆದುಕೊಳ್ಳಿ. ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಒಸಡಿನ ನೋವಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುವುದು.

#ಬೇವು : ಒಸಡಿನ ಸಮಸ್ಯೆ ನಿವಾರಣೆ ಮಾಡಲು ಬೇವಿನ ಎಲೆಗಳನ್ನು ಜಗಿಯಬಹುದು. ಇದರಿಂದ ಹಲ್ಲು ಗುಳಿ ಬೀಳುವುದನ್ನು ತಡೆಯಬಹುದು ಮತ್ತು ಬಾಯಿಯ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಬಹುದು. ಒಣಗಿಸಿ ಪುಡಿ ಮಾಡಿದ ಬೇವಿನ ಎಲೆಗಳನ್ನು ಅಡುಗೆ ಸೋಡಾ ಮತ್ತು ನೀರಿನೊಂದಿಗೆ ಹಾಕಿ ಮೌಥ್ ವಾಶ್ ಮಾಡಿಕೊಳ್ಳಬಹುದು. ಒಸಡಿನ ನೋವು ನಿವಾರಣೆ ಮಾಡಿಕೊಳ್ಳಲು ಇದನ್ನು ನಿಯಮಿತವಾಗಿ ಬಳಸಿಕೊಳ್ಳಿ.

#ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಒಸಡಿನ ನೋವನ್ನು ನಿವಾರಿಸುವಂತಹ ಗುಣಗಳು ಇವೆ. ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು ಮತ್ತು ಅದು ಕೆಟ್ಟ ಮಟ್ಟಕ್ಕೆ ಹೋಗದಂತೆ ತಡೆಯುತ್ತದೆ.

#ಲವಂಗದೆಣ್ಣೆ: ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿರುವ ಲವಂಗ ಹಲ್ಲು ನೋವು ನಿವಾರಣೆಗೆ ಒಳ್ಳೆಯ ಔಷಧ. ಲವಂಗದ ಎಣ್ಣೆಯನ್ನು ನೋವಿರುವ ಹಲ್ಲಿನ ಮೇಲೆ ಹಾಕಿ. ಎಣ್ಣೆ ಒಸಡಿನ ಮೇಲೆ ಬೀಳದ ಹಾಗೆ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಒಸಡು ಉರಿಯುತ್ತದೆ. ಒಂದು ವೇಳೆ ಬಿದ್ದರೂ ಉರಿ ಹೆಚ್ಚು ಸಮಯ ಇರುವುದಿಲ್ಲ.ಕೆಲ ನಿಮಿಷಗಳಲ್ಲಿ ಸರಿಹೋಗುತ್ತದೆ.

#ಕಾಳು ಮೆಣಸು: ಕಾಳು ಮೆಣಸನ್ನು ನೋವಿರುವ ಜಾಗದಲ್ಲಿ ಉಜ್ಜಿಕೊಳ್ಳುವುದರಿಂದ ಆ ಜಾಗ ಬೆಂಡಿನಂತಾಗಿ ನೋವು ಮಾಯವಾಗುತ್ತದೆ.
ಹಸಿ ಈರುಳ್ಳಿ: ಹಸಿ ಈರುಳ್ಳಿಯಲ್ಲಿ ಹಲ್ಲು ನೋವು ಕಡಿಮೆ ಮಾಡುವ ಔಷಧೀಯ ಗುಣಗಳಿವೆ. ಸುಮಾರು 3-4 ನಿಮಿಷಗಳ ಕಾಲ ಈರುಳ್ಳಿಯನ್ನು ಜಗಿಯಬೇಕು. ಅದೂ ಕಷ್ಟವಾದರೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮೇಲೆ ಇರಿಸಿಕೊಳ್ಳಿ. ಇದರಿಂದ ತಕ್ಕಮಟ್ಟಿಗೆ ನೋವು ಕಡಿಮೆ ಆಗುತ್ತದೆ.

Facebook Comments