ತೆಲಂಗಾಣದಲ್ಲಿ ಕಾಂಗ್ರೆಸ್‍ಗೆ ಮತ್ತೊಂದು ಹೊಡೆತ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್(ಪಿಟಿಐ), ಜೂ.16- ತಮ್ಮ ಪಕ್ಷದ 12 ಶಾಸಕರು ಸಾಮೂಹಿಕ ರಾಜೀನಾಮೆ ನೀಡಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಸರ್ಕಾರಕ್ಕೆ ಸೇರಿದ ನಂತರ ತೀವ್ರ ಕಂಗೆಟ್ಟಿರುವ ಕಾಂಗ್ರೆಸ್‍ಗೆ ಇಂದು ಮತ್ತೊಂದು ಹಿನ್ನಡೆಯಾಗಿದೆ.

ಕಾಂಗ್ರೆಸ್‍ನ ಹಿರಿಯ ಶಾಸಕ ಕೆ.ರಾಜಗೋಪಾಲ ರೆಡ್ಡಿ ಟಿಆರ್‍ಎಸ್ ಸೇರುವ ಮುನ್ಸೂಚನೆ ನೀಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಪಕ್ಷಕ್ಕೆ ಸೇರ್ಪಡೆಯಾಗಲಿರುವ ಕಾಂಗ್ರೆಸ್ ಶಾಸಕರ ಸಂಖ್ಯೆ 13ಕ್ಕೇರಲಿದೆ.

ಇತ್ತೀಚೆಗೆ ಕಾಂಗ್ರೆಸ್‍ನ 12 ಶಾಸಕರು ಸಾಮೂಹಿಕ ರಾಜೀನಾಮೆಯಡಿ ಟಿಆರ್‍ಎಸ್ ಸೇರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತೀವ್ರ ಹಿನ್ನಡೆ ಉಂಟು ಮಾಡಿದೆ.

ತಮ್ಮ ಪಕ್ಷಕ್ಕೆ ವಲಸೆ ಬಂದ 12 ಕಾಂಗ್ರೆಸ್ ಶಾಸಕರಿಗೆ ಟಿಆರ್‍ಎಸ್ ಜನಪ್ರತಿನಿಧಿಗಳಾಗಿ ಶಾಸನ ಸಭೆಯಲ್ಲಿ ಮಾನ್ಯತೆ ನೀಡಲಾಗಿತ್ತು.

Facebook Comments