ಟೆಲಿಮಾರ್ಕೆಟಿಂಗ್ ವಂಚನೆ ಆರೋಪದಲ್ಲಿ ಅಮೆರಿಕಾ ಜೈಲುಪಾಲಾದ ಭಾರತೀಯ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಮೇ.28-ಟೆಲಿ ಮಾರ್ಕೆಟಿಂಗ್ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕಾ ಜೈಲುಪಾಲಾಗಿದ್ದಾರೆ. ದೆಹಲಿ ಮೂಲದ ಹಿಮಾಂಶು ಅಸ್ರಿ ಅವರಿಗೆ ಟೆಲಿ ಮಾರ್ಕೆ ಟಿಂಗ್ ವಂಚನೆ ಪ್ರಕರಣದಲ್ಲಿ ಅಮೆರಿಕಾ ನ್ಯಾಯಾಲಯ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಭಾರತದಲ್ಲಿ ಕಾಲ್ ಸೆಂಟರ್ ನಡೆಸುತ್ತಿದ್ದ ಅಸ್ರಿ ಅವರು ನಿಮ್ಮ ಕಂಪ್ಯೂಟರ್‍ಗಳಿಗೆ ವೈರಸ್ ಅಟ್ಯಾಕ್ ಆಗಲಿದೆ ಅದನ್ನು ತಪ್ಪಿಸಬೇಕಾದರೆ ಹಣ ಪಾವತಿಸುವಂತೆ ಅಮೆರಿಕ ಪ್ರಜೆಗಳಿಗೆ ಭಾರಿ ವಂಚನೆ ಮಾಡಿದ್ದರು.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಅಮೆರಿಕ ನ್ಯಾಯಾಲಯ ಆರೋಪಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿದ್ದು, ಶಿಕ್ಷೆ ಪೂರ್ಣಗೊಂಡ ನಂತರ ಆರೋಪಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ತೀರ್ಪು ನೀಡಿದೆ.

Facebook Comments

Sri Raghav

Admin