ಅನಧಿಕೃತವಾಗಿ ಟೆಲಿಫೋನ್ ಎಕ್ಸ್ ಚೆಂಜ್: ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.9- ಅನಧಿಕೃತವಾಗಿ ಟೆಲಿಫೋನ್ ಎಕ್ಸ್ ಚೆಂಜ್ ಸ್ಥಾಪನೆ ಮಾಡಿ, ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ನಷ್ಟ ಉಂಟು ಮಾಡಿದ್ದಲ್ಲದೆ ದೇಶದ ಭದ್ರಗೆಗೂ ಧಕ್ಕೆ ತರುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ರಾಜ್ಯದ ಮಲ್ಲಪುರ ಜಿಲ್ಲೆಯ ಇಬ್ರಾಹಿಂ ಪುಲ್ಲಟ್ಟಿ (36), ತಮಿಳುನಾಡಿನ ತಿರುಪೂರ್ ಜಿಲ್ಲೆಯ ಗೌತಮ್ (27) ಬಂಧಿತ ಆರೋಪಿಗಳು, ಇವರು ಬಂಧಿತರು ಬಿಟಿಎಂ ಲೇಔಟ್ ನ ಆರು ಸ್ಥಳಗಳಲ್ಲಿ 32 ಸಿಮ್ ಕಾರ್ಡ್ ಗಳನ್ನು ಅಳವಡಿಸುವಂತಹ 30 ಎಲೆಕ್ಟ್ರಾನಿಕ್ ಉಪರಕಣಗಳನ್ನು ಇಟ್ಟುಕೊಂಡು 900ಕ್ಕೂ ಹೆಚ್ಚು ಮೊಬೈಲ್ ಸಿಮ್ ಕಾರ್ಡ್ ಗಳನ್ನು ಅಳವಡಿಸಿಕೊಂಡು ಅನಧಿಕೃತವಾಗಿ ಇಂಟರ್ ನ್ಯಾಷನಲ್ ಪೋನ್ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು.

ಬೆಂಗಳೂರು ನಗರದ ಎಟಿಸಿ ಅಧಿಕಾರಿಗಳು ಮಿಲಿಟಿರಿ ಇಂಟಲಿಜೆನ್ಸ್ ಸಹಕಾರದೊಂದಿಗೆ ಬಿಟಿಎಂ ಲೇಔಟ್ ಪ್ರದೇಶದ ಆರು ಸ್ಥಳಗಳಲ್ಲಿ ಅನಧಿಕೃತವಾಗಿ ಸೃಷ್ಟಿಸಲಾಗಿದ್ದ ಟೆಲಿಫೋನ್ ಎಕ್ಸಚೆಂಜ್ ದಾಳಿ ನಡೆಸಿದಾಗ ದೂರ ಸಂಪರ್ಕ ಇಲಾಖೆಗೆ ವಂಚನೆ ಮಾಡುತ್ತಿರುವುದ ಪತ್ತೆಯಾಗಿದೆ’. ಜೊತೆಗೆ ದೇಶದ ಭದ್ರತೆಗೆ ಸಹ ಧಕ್ಕೆಯುಂಟು ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಗಳು ಇತರ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಈ ಪ್ರಕರಣದಲ್ಲಿ ಇತರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ, ಎಟಿಸಿಯ ಎಸಿಪಿ ವೇಣುಗೋಪಾಲ್ ಹಾಗೂ ಭರತ್ ಅವರ ತಂಡ ತನಿಖೆ ನಡೆಸುತ್ತಿದೆ. ಪೊಲೀಸರ ಕಾರ್ಯಾಚರಣೆಗ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು 30 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

Facebook Comments