ಕೊರೊನಾಗೆ ತೆಲುಗು ಹಾಸ್ಯನಟ ವೇಣುಗೋಪಾಲ್ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಸೆ.24- ತಮ್ಮ ವಿಶಿಷ್ಟ ಹಾಸ್ಯದಿಂದಲೇ ಪ್ರೇಕ್ಷಕರನ್ನು ನಗಿಸುತ್ತಿದ್ದ ನಟ ಕೊಸುರಿ ವೇಣುಗೋಪಾಲ್ ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕೆಲವು ದಿನಗಳಿಂದ ಕೊರೊನಾದಿಂದ ಹೈದ್ರಾಬಾದ್‍ನ ಗಚ್ಚಿಬೋಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಣುಗೋಪಾಲ್ ಇಂದು ನಿಧನರಾಗಿದ್ದು ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಹಲವು ನಟರು, ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

ಪಶ್ಚಿಮಗೋದಾವರಿಯ ನರಸಾಪುರದಲ್ಲಿ ಜನಿಸಿದ ವೇಣುಗೋಪಾಲ್ ಭಾರತ ಆಹಾರ ನಿಗಮದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಲೇ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು.

ರಂಗಭೂಮಿಯೊಂದಿಗೂ ಗುರುತಿಸಿಕೊಂಡಿದ್ದ ವೇಣುಗೋಪಾಲ್ 1994ರಲ್ಲಿ ತೆರೆಕಂಡ ತೆಗಿಂಪು ಚಿತ್ರದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಅವರು ರಾಜಮೌಳಿ ನಿರ್ದೇಶನದ ಮರ್ಯಾದ ರಾಮಣ್ಣ, ವಿಕ್ರಮಾರ್ಕುಡು, ಪಿಲ್ಲಾ ಜಮೀನ್ದಾರ್, ಚಲೋ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೋಹನಕೃಷ್ಣ ಇಂದ್ರಗಂಥಿ ನಿರ್ದೇಶನದ ಅಮಿತುಮಿಯಲ್ಲಿ ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು.

ನಾನು ಮರ್ಯಾದ ರಾಮಣ್ಣ ಚಿತ್ರದಿಂದ ಒಬ್ಬ ನಟನಾಗಿ ಗುರುತಿಸಿಕೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ವೇಣುಗೋಪಾಲ್‍ರ ಅಂತ್ಯಕ್ರಿಯೆಯು ಇಂದು ನೆರವೇರಿತು.

Facebook Comments

Sri Raghav

Admin