ಪೂಜಾರಿಗಳ ಕಿತ್ತಾಟದಿಂದ ಪ್ರಸಿದ್ಧ ದೇವಸ್ಥಾನಕ್ಕೆ ಬಿತ್ತು ಬೀಗ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಮೇ 6- ನಗರದ ಸುಪ್ರಸಿದ್ಧ ಆದಿಲ್ ಶಾಹಿ ಕಾಲದ ಪವಾಡ ಬಸವೇಶ್ವರ ದೇವಸ್ಥಾನದ ಪೂಜೆ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದು, ಗರ್ಭಗುಡಿಗೆ ಬೀಗ ಹಾಕಲಾಗಿದೆ.

ಚಿನ್ನಿ ಕಾಲಿಮಠ ಮತ್ತು ನಂದಿಕೋಲಮಠ ಕುಟುಂಬಗಳು ಇಲ್ಲಿ 30 ವರ್ಷಗಳಿಂದ ಪೂಜೆ ಮಾಡುತ್ತಲೇ ಬಂದಿವೆ. ಚಿನ್ನಿಕಾಲಿಮಠ 11 ತಿಂಗಳು ಮತ್ತು ನಂದಿಕೋಲಮಠ 1 ತಿಂಗಳು ಪೂಜೆ ಮಾಡುವುದಾಗಿ ತೀರ್ಮಾನವಾಗಿತ್ತು.

ಆದರೆ ಇದಕ್ಕೆ ಒಪ್ಪದ ನಂದಿಕೋಲಮಠ ಮತ್ತು ಚಿನ್ನಿಕಾಲಿಮಠ ಕುಟುಂಬಸ್ಥರು ಆಗಾಗ ಬಡಿದಾಡುತ್ತಿದ್ದರು. ಮತ್ತೆ ನಿನ್ನೆ ಬೆಳಿಗ್ಗೆ ಪೂಜೆ ಮಾಡಲು ಎರಡು ಕುಟುಂಬಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಗರ್ಭಗುಡಿಗೆ ಎರಡು ಕುಟುಂಬದವರು ಪ್ರತ್ಯೇಕ ಬೀಗ ಜಡಿದಿದ್ದಾರೆ. ಇದರಿಂದ ದೇವರ ದರ್ಶನಕ್ಕಾಗಿ ಬಂದ ನೂರಾರು ಭಕ್ತರು ದೇವರ ದರ್ಶನ ಪಡೆಯದೆ ವಾಪಸ್ ಹೋಗಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಗಲಾಟೆಗೆ ಬೇಸತ್ತ ಮಠದ ಸಮಿತಿ ಮತ್ತು ಭಕ್ತರು ಆಕ್ರೋಶಗೊಂಡು ಇವರಿಬ್ಬರ ಮೇಲೂ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ