ಕಾಶ್ಮೀರದಲ್ಲಿ ಕುಗ್ಗಿದ ಭಯೋತ್ಪಾದನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.17- ಕಳೆದ ಹಲವು ದಶಕಗಳ ಬಳಿಕ ಜಮ್ಮು-ಕಾಶ್ಮೀರ ಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳ ಶಕ್ತಿ ಕುಂದಿದೆ ಎಂದು ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕಾಶ್ಮೀರದಲ್ಲಿದ್ದ ಭಯೋತ್ಪಾದಕ ಚಟುವಟಿಕೆಗಳು ಕ್ಷೀಣಿಸಿವೆ. ಉಗ್ರರ ಸಂಖ್ಯೆ 217ಕ್ಕೆ ಕುಸಿದಿದೆ. ಕಳೆದ ಆರು ತಿಂಗಳಲ್ಲಿ 17 ಮಂದಿ ಉಗ್ರಗಾಮಿ ಸಂಘಟನೆಗಳಿಗೆ ಸೇರಿರುವ ಮಾಹಿತಿ ಇದೆ.

ಈ ರೀತಿ ದಾರಿ ತಪ್ಪಿದ ಯುವಕರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರ ಸುಸ್ಥಿರವಾದ ಶರಣಾಗತಿ ನೀತಿಯೊಂದನ್ನು ರೂಪಿಸಿದೆ. ಇದನ್ನು ಬಳಕೆ ಮಾಡಿಕೊಂಡು ವಾಪಸ್ ಬರುವಂತೆ ಕರೆ ನೀಡಿದ್ದಾರೆ. ನೆರೆಯ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಮುಂದುವರಿಸಿದೆ. ಗಡಿಭಾಗದಲ್ಲಿ ಸುರಂಗಗಳನ್ನು ತೋಡುವುದು, ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಪೂರೈಸುವುದನ್ನು ಮುಂದುವರಿಸಿದೆ.

ಇದನ್ನು ತಡೆಯುವ ಸಲುವಾಗಿ ನಮ್ಮ ಸೇನಾ ತುಕಡಿಗಳು ನಿರಂತರ ಕಣ್ಗಾವಲಿಟ್ಟಿವೆ. ಪ್ರತಿದಿನ 25 ರಿಂದ 30 ಕಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುರಂಗಗಳನ್ನು ಪತ್ತೆಹಚ್ಚಲು ಅತ್ಯಾಧುನಿಕವಾದ ರ್ಯಾಡಾರ್ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ ಎಂದರು.

Facebook Comments