ಲಂಡನ್ ಬ್ರಿಡ್ಜ್ ಮೇಲೆ ದಾಳಿ ಮಾಡಿ ಇಬ್ಬರನ್ನು ಹತ್ಯೆ ಮಾಡಿದ ಉಗ್ರರನ್ನು ಹೊಡೆದುರುಳಿಸದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ನ.30- ಇಂಗ್ಲೆಂಡ್ ರಾಜಧಾನಿ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಭಯೋತ್ಪಾದಕನೊಬ್ಬ ಚೂರಿ ದಾಳಿ ನಡೆಸಿದ ಮಾದರಿಯಲ್ಲೇ ನಡೆದ ಮತ್ತೊಂದು ಆಕ್ರಮಣದಲ್ಲಿ ಸಾವು-ನೋವು ಸಂಭವಿಸಿದೆ. ಲಂಡನ್‍ನಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದು, ಶಸ್ತ್ರಧಾರಿ ಉಗ್ರನೊಬ್ಬ ಮನಸೋ ಇಚ್ಛೆ ಚಾಕು ಇರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ಲಂಡನ್ ಬ್ರಿಡ್ಜ್ ಮೇಲೆ ಪಾದಚಾರಿಗಳನ್ನು ಗುರಿಯಾಗಿಸಿಕೊಂಡು ಉಗ್ರ ಈ ದಾಳಿ ನಡೆಸಿದ್ದು, ಈ ಕೃತ್ಯದಲ್ಲಿ ಸ್ಥಳದಲ್ಲೇ ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಶಸ್ತ್ರಧಾರಿ ಉಗ್ರನನ್ನು ಹೊಡೆದುರುಳಿಸಿದ್ದಾರೆ.

ಅಲ್ಲದೆ ಆತ ಸ್ಫೋಟಕಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಮಾನವ ಬಾಂಬ್ ದಾಳಿಗೆ ಸಿದ್ಧನಾಗಿದ್ದ ಎಂದು ಮಾಹಿತಿ ನೀಡಿದ್ದಾರೆ. ಇನ್ನು ದಾಳಿಕೋರ ಶಂಕಿತ ಉಗ್ರ ಈ ಹಿಂದೆಯೂ ಕೂಡ ಇದೇ ರೀತಿಯ ಉಗ್ರ ದಾಳಿಯ ಆರೋಪಿಯಾಗಿದ್ದು, ಈತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು.

ಲಂಡನ್‍ನಲ್ಲಿ ಇತ್ತೀಚೆಗೆ ನಡೆದ ಮೂರನೆ ಉಗ್ರಗಾಮಿ ದಾಳಿ ಇದಾಗಿದೆ. ಹಿಂದೆ ಕಾರೊಂದನ್ನು ಉಗ್ರಗಾಮಿಯೊಬ್ಬ ಗುಂಪಿನತ್ತ ನುಗ್ಗಿಸಿ ಸಾವು-ನೋವಿಗೆ ಕಾರಣವಾಗಿದ್ದ. ಇದಾದ ಕೆಲವೇ ದಿನಗಳಲ್ಲಿ ಚಾಕು ಹಿಡಿದಿದ್ದ ವ್ಯಕ್ತಿಯೊಬ್ಬ ಸೇತುವೆ ಮೇಲೆ ಹೋಗುತ್ತಿದ್ದ ಗುಂಪಿನತ್ತ ದಾಳಿ ಮಾಡಿ ಕೆಲವರನ್ನು ಕೊಂದಿದ್ದ.

Facebook Comments