ಎನ್‍ಕೌಂಟರ್ : ಉಗ್ರಗಾಮಿ ಹತ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಸೆ.24- ಉಗ್ರಗಾಮಿಗಳ ಹಾವಳಿ ಹೆಚ್ಚಾಗಿರುವ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಯೋಧರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರಗಾಮಿಯೊಬ್ಬ ಹತನಾಗಿದ್ದಾನೆ.  ಮೃತನ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪುಲ್ವಾಮಜಿಲ್ಲೆಯತ್ರಾಲ್ ಪ್ರದೇಶದ ಮಘಮಾದಲ್ಲಿ ಉಗ್ರರುಅವಿತಿಟ್ಟುಕೊಂದಿರುವ ಖಚಿತ ವರ್ತಮಾನದ ಮೇರೆಗೆಯೋದರು ಮತ್ತು ಪೊಲೀಸರು ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸುತ್ತಿದ್ದರು.

ಇದೇ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾಪಡೆಗಳೂ ಸಹ ದಾಳಿ ನಡೆಸಿದಾಗ ಗುಂಡಿನ ಕಾಳಗ ನಡೆಯಿತು. ಎನ್‍ಕೌಂಟರ್‍ನಲ್ಲಿ ಉಗ್ರಗಾಮಿ ಯೊಬ್ಬಹತನಾಗಿದ್ದು, ಗುಂಡಿನ ಕಾಳಗದ ವೇಳೆ ಪರಾರಿಯಾಗಿರುವ ಇತರ ಭಯೋತ್ಪಾದಕರಿಗೆ ಶೋಧ ಮುಂದುವರಿದಿದೆ.

Facebook Comments