ಬಿಗ್ ಬ್ರೇಕಿಂಗ್ : ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಹೊಸ ಟ್ವಿಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.17-ರಾಜಧಾನಿ ಬೆಂಗಳೂರಿನ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದ್ದು, ಭಯೋತ್ಪಾದನೆ ಉಗ್ರಗಾಮಿ ಸಂಘಟನೆಯ ಪ್ರಮುಖ ಸದಸ್ಯನೊಬ್ಬನನ್ನು ಬಂಸಲಾಗಿದೆ.

ಬಾಂಗ್ಲಾ ಮೂಲದ ಅಲ್-ಹಿಂದ್ ಉಗ್ರಗಾಮಿ ಸಂಘಟನೆಯ ದಕ್ಷಿಣ ಭಾರತದ ಪ್ರಮುಖ ನಾಯಕನಾಗಿದ್ದ ಸಮೀವುದ್ದೀನ್ ಎಂಬಾತನನ್ನು ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಮತ್ತು ಪೂರ್ವ ವಿಭಾಗದ ಪೊಲೀಸರು ಬಂಸಿದ್ದಾರೆ.

ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಅಲ್-ಹಿಂದ್ ಹಾಗೂ ಐಸಿಸ್ ಉಗ್ರಗಾಮಿ ಸಂಘಟನೆ ಜೊತೆ ಈತ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಸಮೀವುದ್ದೀನ್ ಶಾಮೀಲಾಗಿದ್ದು ಈತನ ಕುಮ್ಮಕಿನಿಂದಲೇ ಪ್ರೇರಿತರಾಗಿ ಬೆಂಬಲಿಗರು ಗಲಭೆ ಎಬ್ಬಿಸಿದ್ದರು ಎನ್ನಲಾಗುತ್ತಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳು ಮತ್ತು ಮೊಬೈಲ್ ಕರೆಗಳನ್ನು ಆಧರಿಸಿ ರಹಸ್ಯ ಸ್ಥಳವೊಂದರಲ್ಲಿ ಅಡಗಿದ್ದ ಸಮೀವುದ್ದೀನ್‍ನನ್ನು ಮುಂಜಾನೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಬೆಂಗಳೂರಿನ ಶಿವಾಜಿನಗರದ ಬಳಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಈತನ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು.

ಕರ್ನಾಟಕ, ಕೇರಳ, ಮಹಾರಾಷ್ಟ್ರ , ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದ ಸಮೀವುಲ್ ದಕ್ಷಿಣ ಭಾರತದಲ್ಲಿ ಅಲ್-ಹಿಂದ್ ಸಂಘಟನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎನ್ನಲಾಗುತ್ತಿದೆ.

ಅಲ್-ಹಿಂದ್ ಸಂಘಟನೆಯು ಮೂಲತಃ ಬಾಂಗ್ಲಾದೇಶದಲ್ಲಿ ಸಕ್ರಿಯವಾಗಿದ್ದು, ಬಾಂಬ್ ಸೋಟ, ಮಾನವ ಹತ್ಯಾ ಬಾಂಬ್ ಸೇರಿದಂತೆ ಉಗ್ರಗಾಮಿ ಚಟುವಟಿಕೆಗಳಲ್ಲಿ ಈ ಸಂಘಟನೆ ಸಕ್ರಿಯವಾಗಿದೆ.

ಕೇಂದ್ರ ಸರ್ಕಾರ ಬಬ್ಬರ್ ಖಾಲ್ಸಾ ಇಂಟರ್‍ನ್ಯಾಷನಲ್, ಖಲಿಸ್ತಾನ ಕಮಾಂಡರ್ ಫೋರ್ಸ್, ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಸೇರಿದಂತೆ ಹತ್ತು ಸಂಘಟನೆಗಳನ್ನು ನಿಷೇಸಿದೆ.

Facebook Comments

Sri Raghav

Admin