ಪಾಕಿಸ್ತಾನ ಷೇರುಪೇಟೆ ಕಟ್ಟಡ ಮೇಲೆ ಉಗ್ರರ ದಾಳಿ, 9 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಕರಾಚಿ, ಜೂ.29-ಉಗ್ರಗಾಮಿ ಸಂಘಟನೆಗಳು ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸದಾ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಅಲ್ಲಿನ ಆತಂಕವಾದಿಗಳೇ ಮಗ್ಗುಲ ಮುಳ್ಳಾಗಿದ್ದಾರೆ. ಪಾಕಿಸ್ತಾನ ಸ್ಟಾಕ್ ಎಕ್ಸ್‍ಚೇಂಜ್ (ಷೇರುಪೇಟೆ) ಕಟ್ಟಡದ ಬಗ್ಗೆ ನಡೆದ ಉಗ್ರಗಾಮಿಗಳ ದಾಳಿಯಲ್ಲಿ ಐವರು ಭದ್ರತಾಪಡೆ ಸಿಬ್ಬಂದಿ ಹತರಾಗಿದ್ದಾರೆ.

ಗುಂಡಿನ ಚಕಮಕಿಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.ಷೇರುಪೇಟೆ ಕಟ್ಟಡಕ್ಕೆ ನುಗ್ಗಲು ಯತ್ನಿಸಿದ ನಾಲ್ವರು ಶಸ್ತ್ರಸಜ್ಜಿತ ಉಗ್ರಗಾಮಿಗಳು ಮುಖ್ಯದ್ವಾರದ ಬಳಿ ಗ್ರೆನೇಡ್ ಎಸೆದು ಮನಬಂದಂತೆ ಗುಂಡು ಹಾರಿಸಿದರು.

ಈ ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಸಬ್ ಇನ್ಸ್‍ಪೆಕ್ಟರ್ ಒಬ್ಬರು ಹತರಾದರು. ಈ ಘಟನೆಯಲ್ಲಿ ಕೆಲವು ಮಂದಿಗೆ ತೀವ್ರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.  ನಂತರ ನಡೆದ ಗುಂಡಿನ ಕಾಳಗದಲ್ಲಿ ಎಲ್ಲ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಉನ್ನತಾಧಿಕರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯಿಂದ ಸ್ಟಾಕ್ ಎಕ್ಸ್‍ಚೇಂಜ್ ಕಟ್ಟಡದಲ್ಲಿ ಭಾರೀ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎಂದು ಷೇರು ಪೇಟೆ ನಿರ್ದೇಶಕ ಅಬಿದ್ ಅಲಿ ಹಬೀಬ್ ತಿಳಿಸಿದ್ದಾರೆ. ಈ ಕೃತ್ಯವನ್ನು ಸಿಂಧ್ ಪ್ರಾಂತ್ಯದ ರಾಜ್ಯಪಾಲ ಇಮ್ರಾನ್ ಇಸ್ಮಾಯಿಲ್ ಸೇರಿದಂತೆ ಅನೇಕ ಗಣ್ಯರು ಖಂಡಿಸಿದ್ದಾರೆ.

Facebook Comments