ರಾಜ್ಯಸಭೆಯ ನಾಯಕರಾಗಿ ತಾವರ್‍ಚಂದ್ ಗೇಹ್ಲೋಟ್ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.12- ಬಿಜೆಪಿ ಹಿರಿಯ ಮುಖಂಡ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‍ಚಂದ್ ಗೇಹ್ಲೋಟ್ ಅವರನ್ನು ರಾಜ್ಯಸಭೆಯ ನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಈವರೆಗೆ ರಾಜ್ಯಸಭೆ ನಾಯಕನಾಗಿದ್ದ ಅರುಣ್ ಜೇಟ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ ಸೇರ್ಪಡೆಯಾಗಿಲ್ಲ, ಹೀಗಾಗಿ ಬಿಜೆಪಿಯ ಹಿರಿಯ ದಲಿತ ನಾಯಕ ಗೇಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ 2014ರ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲೂ ಗೇಹ್ಲೋಟ್ ಬಿಜೆಪಿ ಮತ್ತು ಸಂಘ ಪರಿವಾರದ ನಿಷ್ಠೆಯುಳ್ಳವರು. 1948 ಮೇ 18ರಂದು ಮಧ್ಯಪ್ರದೇಶದ ಉಜ್ಜೆನಿ ಜಿಲ್ಲೆಯ ರೂಪೇತಾದಲ್ಲಿ ಜನಿಸಿದ ಅವರು, ವಿಕ್ರಂ ವಿವಿಯಲ್ಲಿ ಪದವೀದರರೂ ಹೌದು.

1996-2009ರ ವರೆಗೆ ಶಾಜಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಗೇಹ್ಲೋಟ್ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಆತ್ಮೀಯರು ಹೌದು. 2009ರ ಚುನಾವಣೆಯಲ್ಲಿ ಪರಾಭವಗೊಂಡ ಅವರನ್ನು 2012ರಲ್ಲಿ ಮಧ್ಯಪ್ರದೇಶದಿಂದ ರಾಜಸ್ತಾನಕ್ಕೆ ಆಯ್ಕೆ ಮಾಡಲಾಯಿತು.

ಪುನಃ ತಮ್ಮ ತವರು ರಾಜ್ಯದಿಂದಲೇ ಮೇಲ್ಮೆನೆಗೆ ಆಯ್ಕೆಯಾಗಿದ್ದು, ಅವರ ಅಧಿಕಾರ ಅವಧಿ 2024ರ ವರೆಗೆ ಇದೆ. ಈ ಹಿಂದೆ ಕರ್ನಾಟಕ ಉಸ್ತುವಾರಿಯಾಗಿದ್ದ ಅವರು ಗುಜರಾತ್‍ನಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ ಅನುಭವವಿದೆ.ಬಿಜೆಪಿಯ ಅತ್ಯುನ್ನತ ನೀತಿ, ನಿರೂಪಣೆಗಳನ್ನು ತೀರ್ಮಾನಿಸುವ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ.

ಪಕ್ಷದ ವಹಿಸಿದ ಯಾವುದೇ ಕೆಲಸವನ್ನು ಶಿಸ್ತಿನ ಸಿಫಾಯಿಯಾಗಿ ನಿರ್ವಹಿಸುವ ಗೇಹ್ಲೋಟ್‍ಗೆ ಈಗ ಸಹಜವಾಗಿ ರಾಜ್ಯಸಭೆಯ ಸ್ಥಾನ ಒಲಿದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin