ಬ್ರೇಕಿಂಗ್ : 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪ್ರಕಟ..!

ಈ ಸುದ್ದಿಯನ್ನು ಶೇರ್ ಮಾಡಿ

ಸ್ಟಾಕ್‍ಹೋಮ್, ಅ.7-ವಿವಿಧ ಕ್ಷೇತ್ರಗಳ ಸರ್ವ ಶ್ರೇಷ್ಠ ಸಾಧಕರಿಗೆ ನೀಡಲಾಗುವ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಫಿಸಿಯೋಲಾಜಿ ಅಥವಾ ಮೆಡಿಸಿನ್ ವಿಭಾಗದಲ್ಲಿ ಖ್ಯಾತ ವಿಜ್ಞಾನಿಗಳಾದ ವಿಲಿಯಮ್ ಜಿ. ಕಾಯಿಲಿನ್ ಜ್ಯೂನಿಯರ್, ಸರ್ ಪೀಟರ್ ಜೆ ರ್ಯಾಟ್‍ಕ್ಲಿಫ್ ಮತ್ತು ಗ್ರೆಗ್ ಎಲ್ ಸೊಮೆಂಜಾ ಅವರಿಗೆ ಜಂಟಿ ಪುರಸ್ಕøತರಾಗಿ ಆಯ್ಕೆಯಾಗಿದ್ದಾರೆ.

ಕೋಶಗಳ ಪ್ರಜ್ಞೆ ಮತ್ತು ಆಮ್ಲಜನಕ ಲಭ್ಯತೆಗಾಗಿ ಅವುಗಳ ಅಳವಡಿಕೆ ಕುರಿತ ಮಹತ್ವದ ಸಂಶೋಧನೆಗಾಗಿ ಈ ವಿಜ್ಞಾನಿಗಳಿ ಈ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಅ.7 ರಿಂದ 14ರವರೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವ ವಿಜ್ಞಾನ, ಔಷಧಿ ವಿಜ್ಞಾನ, ವೈದ್ಯಕೀಯ ಸಂಶೋಧನೆ, ಆರ್ಥಿಕ ಕ್ಷೇತ್ರ ಮತ್ತು ಶಾಂತಿ ಸ್ಥಾಪನೆಗಾಗಿ ವಿಶ್ವದ ಮಹಾ ಸಾಧಕರಿಗೆ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸ್ವೀಡನ್‍ನ ಖ್ಯಾತ ವಿಜ್ಞಾನಿ ಮತ್ತು ಉದ್ಯಮಿ ಅಲ್ಫ್ರೆಡ್ ಬರ್ನಾಡ್ ನೊಬೆಲ್ (21ನೇ ಆಕ್ಟೋವರ್ 1833-1896) ಅವರ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

Facebook Comments

Sri Raghav

Admin