ನಿಧಿ ಆಸೆಗಾಗಿ ಬಾಲಕನ ಮರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Child-murder

ಬಾಗಲಕೋಟೆ, ಆ.4-ನಿಧಿ ಆಸೆಗಾಗಿ ದುಷ್ಕರ್ಮಿಗಳು ಬಾಲಕನನ್ನು ಅಪಹರಿಸಿ ಮರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಳಿ ನಡೆದಿದೆ. ಮುತ್ತಪ್ಪ ಅಮಜಗೋಳ (4) ಕೊಲೆಯಾದ ಬಾಲಕ. ಬಾಲಕನನ್ನು ಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂಬ ಮೂಢನಂಬಿಕೆಗೆ ಒಳಗಾದ ದುಷ್ಕರ್ಮಿಗಳು ಬಾಲಕನನ್ನು ಅಪಹರಿಸಿ ಬ್ಲೇಡ್‍ನಿಂದ ಕತ್ತು, ಮರ್ಮಾಂಗ ಕೊಯ್ದು ಕೊಲೆ ಮಾಡಿದ್ದಾರೆ.

ಬಾಲಕ ಕಣ್ಮರೆಯಾಗಿರುವುದರಿಂದ ಆತಂಕಗೊಂಡ ಪೋಷಕರು ಗ್ರಾಮದಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಬಾಲಕ ಪತ್ತೆಯಾಗಿರಲಿಲ್ಲ. ಕೊನೆಗೆ ಗ್ರಾಮದ ಸಮೀಪ ಜಮೀನೊಂದರಲ್ಲಿ ಶವವಾಗಿ ಪತ್ತೆಯಾಗಿದೆ. ನಿಧಿ ಅಥವಾ ಬಂಗಾರದ ಆಸೆಗಾಗಿ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಬನಹಟ್ಟಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin