ಕಪಿಲಾನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಾಯಿ, ಇಬ್ಬರು ಮಕ್ಕಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Save-sucaid

ಮೈಸೂರು, ಆ.3- ಪತಿಯ ಕಿರುಕುಳದಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಕಪಿಲಾನದಿಗೆ ಹಾರಲು ಯತ್ನಿಸುತ್ತಿದ್ದ ತಾಯಿ ಹಾಗೂ ಇಬ್ಬರು ಮಕ್ಕಳನ್ನು ನಂಜನಗೂಡು ದೇವಾಲಯದ ಅಧಿಕಾರಿಗಳು ರಕ್ಷಿಸಿದ್ದಾರೆ. ಮೈಸೂರಿನ ಸುಣ್ಣದಕೇರಿ ನಿವಾಸಿ ಶಿವಕುಮಾರ್ ಎಂಬಾತನನ್ನು ಜಯಾ ಎಂಬಾಕೆ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರತಿನಿತ್ಯ ಕ್ಷುಲ್ಲಕ ಕಾರಣಕ್ಕೆ ಪತಿ ಜಗಳವಾಡುತ್ತಿದುದ್ದರಿಂದ ಜಯ ಬೇಸರಗೊಂಡಿದ್ದರು ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ಮನೆಯಿಂದ ಇಬ್ಬರು ಮಕ್ಕಳನ್ನು ಕರೆದುಕೊಂಡು ನಂಜನಗೂಡಿಗೆ ಬಂದಿದ್ದಾರೆ. ಇಲ್ಲಿನ ಕಪಿಲಾ ನದಿ ಬಳಿ ಮಕ್ಕಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದುದ್ದನ್ನು ಗಮನಿಸಿದ ದೇವಾಲಯದ ಅಧಿಕಾರಿಗಳು ಮಹಿಳೆ ಬಳಿ ಹೋಗಿ ವಿಚಾರಿಸಿದ್ದಾರೆ.

ಈ ಸಂದರ್ಭದಲ್ಲಿ ಪತಿಯ ವರ್ತನೆಯನ್ನು ಅಳುತ್ತಾ ಹೇಳಿಕೊಂಡಾಗ ಅಧಿಕಾರಿಗಳು ಸಮಾಧಾನಪಡಿಸಿ ನಂಜನಗೂಡು ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ಈ ಮಹಿಳೆಯನ್ನು ವಿಚಾರಿಸಿದಾಗ ಪ್ರತಿನಿತ್ಯ ಗಂಡ ಶಿವಕುಮಾರ್ ಮಕ್ಕಳಿಗೆ ಹಾಗೂ ನನಗೆ ಕಿರುಕುಳ ನೀಡುತ್ತಿದುದ್ದರಿಂದ ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಪೊಲೀಸರು ಶಿವಕುಮಾರನನ್ನು ಠಾಣೆಗೆ ಕರೆಸಿಕೊಂಡು ಬುದ್ದಿವಾದ ಹೇಳಿ ಪತ್ನಿ ಹಾಗೂ ಮಕ್ಕಳಿಗೆ ಕಿರುಕುಳ ನೀಡದಂತೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ಆತನ ಪತ್ನಿ ಹಾಗೂ ಮಕ್ಕಳನ್ನು ಕಳುಹಿಸಿಕೊಟ್ಟಿದ್ದಾರೆ.

Facebook Comments

Sri Raghav

Admin