ರೈತರಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪುರಸಭೆ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ACB
ಆನೇಕಲ್, ಜು.8- ರೈತರಿಂದ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಘಟನೆ ಚಂದಾಪುರ ಪುರಸಭೆಯಲ್ಲಿ ನಡೆದಿದೆ. ಚಂದಾಪುರ ಪುರಸಭೆಯ ಆರ್‍ಒ ಹೀರೇಗೌಡ, ಆರ್‍ಐ ಜಯದೇವ್, ಕರವಸೂಲಿಗಾರ ನಾಗರಾಜ್ ಎಸಿಬಿ ಬಲೆ ಬಿದ್ದ ಅಧಿಕಾರಿಗಳು. ಚಂದಾಪುರ ಪುರಸಭೆ ವ್ಯಾಪ್ತಿಯ ಇಗ್ಗಲೂರು ಗ್ರಾಮದ ವಾಸಿಯಾದ ಸುಬ್ರಮಣಿ ಅವರು ಮನೆಗೆ ಖಾತೆ ಬದಲಾವಣೆಗೆಂದು ಪುರಸಭಾ ಅಧಿಕಾರಿಗಳಿಗೆ 25 ಸಾವಿರ ರೂ. ಲಂಚ ನೀಡುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುಬ್ರಮಣಿ ಮಾತನಾಡಿ, ಚಂದಾಪುರ ಪುರಸಭೆಯಲ್ಲಿ ಸಾಮಾನ್ಯ ಜನರ ಕೆಲಸಗಳು ನಡೆಯುವುದಿಲ್ಲ. ಹಣ ಕೊಟ್ಟರೆ ಎಂತಹ ಕೆಲಸ ಬೇಕಾದರು ಆಗುತ್ತದೆ. ನಾವು ಮೂರು ಅಣ್ಣತಮ್ಮಂದಿರಿದ್ದು, ನಮ್ಮಗಳ ಹೆಸರಿಗೆ ಮನೆಯ ಖಾತೆ ಮಾಡಿಸಲು ಹೋದಾಗ ನಿಮ್ಮದು ಡಿಸಿ ಕನ್ವರ್‍ಷನ್ ಆಗಿದ್ದು, ಖಾತೆ ಮಾಡಲು ಆಗುವುದಿಲ್ಲ ಎಂದು ಹೇಳಿ 45 ಸಾವಿರ ರೂ.ಹಣ ಕೊಟ್ಟರೆ ಮಾಡಿಕೊಡುವುದಾಗಿ ಅಧಿಕಾರಿಗಳು ಹೇಳಿದರು. ಅದರಂತೆ 10 ಸಾವಿರ ರೂಪಾಯಿ ಹಣವನ್ನು ಅಧಿಕಾರಿಗಳಿಗೆ ಮುಂಗಡ ಹಣ ನೀಡಿ ನಂತರ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು, ಇಂದು 25 ಸಾವಿರ ರೂ.ಹಣವನ್ನು ಅಧಿಕಾರಿಗಳಿಗೆ ನೀಡಿ ಎಸಿಬಿಗೆ ಇಡಿದು ಕೊಡಲು ಸಹಾಯ ಮಾಡಿದ್ದೇನೆ ಎಂದು ಹೇಳಿದರು.

Facebook Comments

Sri Raghav

Admin