ಸೂರ್ಯನ ತೀರಾ ಸನಿಹಕ್ಕೆ ತೆರಳಿದ ನಾಸಾ ನೌಕೆ, ರೋಚಕ ಮಾಹಿತಿ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಡಿ.5- ಸೌರಮಂಡಲದ ರಹಸ್ಯ ಬೇಧಿಸಲು ಕಾರ್ಯೋನ್ಮುಖರಾಗಿರುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾದ ಪಾರ್ಕರ್ ಸೋಲಾರ್ ಗಗನ ನೌಕೆ ಸೂರ್ಯನಿಗೆ ಅತ್ಯಂತ ಸಮೀಪಕ್ಕೆ ತೆರಳುವಲ್ಲಿ ಯಶಸ್ವಿಯಾಗಿದೆ.

ಈವರೆಗೆ ಯಾವುದೇ ನೌಕೆ ರವಿತೇಜನ ಬಳಿ ಇಷ್ಟು ಹತ್ತಿರಕ್ಕೆ ತೆರಳಿಲ್ಲ. ಈ ವಿಷಯದಲ್ಲಿ ನಾಸಾದ ಈ ಸಾಧನೆ ಪ್ರಥಮ ಎನಿಸಿದೆ. ಸೂರ್ಯನ ತೀರ ಹತ್ತಿರಕ್ಕೆ ತೆರಳಿ ಅಲ್ಲಿನ ಉಜ್ವಲ ಪ್ರಭೆ, ಗಾಳಿ ಮತ್ತು ಅಗಾಧ ಉಷ್ಣಾಂಶ ಕುರಿತ ವಿವರಗಳನ್ನು ಈ ನೌಕೆ ನಾಸಾಗೆ ರವಾನಿಸಿದೆ.

ಸೂರ್ಯ ಒಂದು ನಕ್ಷತ್ರವಾಗಿದ್ದರೂ ಇತರ ತಾರೆಗಳಿಗಿಂತ ಅತ್ಯಂತ ಉಜ್ವಲ ಮತ್ತು ಅಗಾಧ ಉಷ್ಣಾಂಶವನ್ನು ಒಳಗೊಂಡಿದೆ. ಸೌರಮಂಡಲದ ತಾಪಮಾನ ಅನೇಕ ಪಟ್ಟುಗಳಷ್ಟು ಹೆಚ್ಚಾಗಿರಲು ಕಾರಣವೇನು?

ಇಲ್ಲಿನ ಗಾಳಿ ಮತ್ತು ಪ್ರಭಾವ ವಲಯದ ರಹಸ್ಯಗಳೇನು ಎಂಬ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಲು ಪಾರ್ಕರ್ ಸೋಲಾರ್ ಪ್ರೊಬ್(ಸೌರ ತನಿಖೆ) ರವಾನಿಸಿರುವ ಚಿತ್ರಗಳು
ಮತ್ತು ಕೆಲವು ಮಾಹಿತಿಗಳು ನೆರವಾಗಲಿವೆ.

Facebook Comments