ಬಾಲಿವುಡ್‍ನಲ್ಲಿ ಹಾಲಿವುಡ್ ನಟ ಡ್ವೆಯ್ನ ಜಾನ್ಸನ್..!

ಈ ಸುದ್ದಿಯನ್ನು ಶೇರ್ ಮಾಡಿ

ಲಾಸ್ ಕಾಬೋಸ್, ಡಿ.8- ವಿಶ್ವದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಹಾಲಿವುಡ್ ಆ್ಯಕ್ಷನ್ ಸ್ಟಾರ್ ಡ್ವೆಯ್ನ ಜಾನ್ಸನ್ ಬಾಲಿವುಡ್‍ನಲ್ಲಿ ನಟಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹಿಂದಿ ಚಿತ್ರರಂಗದ ಬಗ್ಗೆ ನನಗೆ ತುಂಬ ಒಲವಿದೆ.

ಈ ಹಿಂದೆ ನಾನು ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ವೇ ವಾಚ್ ಸಿನಿಮಾದಲ್ಲಿ ನಟಿಸಿದ್ದೇನೆ. ಆಲ್ಲದೆ ವರುಣ್ ದವನ್ ನನ್ನ ಚಿತ್ರಗಳನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ. ಅವರು ನನ್ನ ಅಭಿಮಾನಿ ಎಂದು ಹೇಳಿಕೊಂಡಿರುವುದು ನನಗೆ ತುಂಬ ಸಂತಸವಾಗಿದೆ ಎಂದು ಜಾನ್ಸನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಬಾಲಿವುಡ್‍ನಿಂದ ಆಫರ್ ಬಂದರೆ ಒಪ್ಪಿಕೊಳ್ಳುವಿರಾ ಎಂಬ ಪ್ರಶ್ನೆಗೆ ಏಕಾಗಬಾರದು, ನನಗೆ ಹಿಂದಿ ಚಿತ್ರರಂಗದ ಬಗ್ಗೆ ಮತ್ತು ಅಲ್ಲಿನ ನಟ-ನಟಿಯರ ಬಗ್ಗೆ ನನಗೆ ತುಂಬಾ ಗೌರವವಿದೆ. ನಾನು ಹಿಂದಿ ಚಿತ್ರಗಳನ್ನು ವೀಕ್ಷಿಸುತ್ತೇನೆ. ವರುಣ್ ದವನ್ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ದೈತ್ಯದೇಹಿ ಜಾನ್ಸನ್ ಹೇಳಿದ್ದಾರೆ.

ಹಾಲಿವುಡ್‍ನ ಈ ಆ್ಯಕ್ಷನ್ ಸ್ಟಾರ್ ನಟಿಸಿರುವ ಬಹುತೇಕ ಎಲ್ಲ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ಒಂದು ಸಿನಿಮಾಗೆ 650 ದಶಲಕ್ಷ ಡಾಲರ್ ಸಂಭಾವನೆ ಪಡೆಯುವ ಈ ಪ್ರತಿಭೆ ಅಭಿನಯದ ಜಮಾಂಜಿ ಸಿನಿಮಾ ಹಾಲಿವುಡ್‍ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

Facebook Comments

Sri Raghav

Admin