ಚೆಕ್‍’ಪೋಸ್ಟ್’ನಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಬರಲೇ ಇಲ್ಲ ಹಣ..!

ಈ ಸುದ್ದಿಯನ್ನು ಶೇರ್ ಮಾಡಿ

Election-CkeckPost-1

ಬೆಂಗಳೂರು, ಜು.23- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೆಸರಘಟ್ಟ ಮತ್ತು ದಾಸನಪುರ ಹೋಬಳಿಯಲ್ಲಿ ತೆರೆಯಲಾಗಿದ್ದ ಚೆಕ್‍’ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಚುನಾವಣೆ ಮುಗಿದು ಫಲಿತಾಂಶ ಬಂದು ಸರ್ಕಾರ ರಚನೆಯಾದರೂ ಇನ್ನೂ ಹಣವನ್ನೇ ನೀಡಿಲ್ಲ. ಎರಡು ಹೋಬಳಿಗಳಿಂದ ವಿಧಾನಸಭಾ ಚುನಾವಣೆಗೆ ಏಳು ಚೆಕ್‍’ಪೋಸ್ಟ್ಗಳನ್ನು ನಿಯೋಜನೆ ಮಾಡಲಾಗಿತ್ತು. ಸುಮಾರು 27 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, 20 ಗ್ರಾಪಂ ಕಾರ್ಯದರ್ಶಿಗಳನ್ನು ನೇಮಿಸಲಾಗಿತ್ತು.

ಸುಮಾರು 80 ಸಿಬ್ಬಂದಿಗಳು ಚೆಕ್‍’ಪೋಸ್ಟ್ಗಳಲ್ಲಿ ಹಗಲು-ರಾತ್ರಿ ಕಾರ್ಯ ನಿರ್ವಹಿಸಿದ್ದರು. ಒಬ್ಬ ಸಿಬ್ಬಂದಿಗೆ ಒಂದು ತಿಂಗಳ ಕಾಲ ಮಾಡುವ ಕೆಲಸಕ್ಕೆ ಆರು ಸಾವಿರ ರೂ.ಗಳನ್ನು ಚುನಾವಣೆ ಅಯೋಗ ನಿಗದಿ ಮಾಡಿತ್ತು. 45 ದಿನಗಳ ಕಾಲ ಚೆಕ್‍’ಪೋಸ್ಟ್ನಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಾರೆ. ಅನಾವಶ್ಯಕವಾಗಿ ಹಣ ಪೋಲು ಮಾಡುವ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಿಬ್ಬಂದಿಗೆ ಹಣ ನೀಡದಿರುವುದು ನಿಜಕ್ಕೂ ನೋವಿನ ವಿಷಯ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಮ್ಮ ನೋವು ಹಂಚಿಕೊಂಡರು. ಯಲಹಂಕ ಉತ್ತರ ವಲಯದ ಚುನಾವಣಾಧಿಕಾರಿಯಾಗಿದ್ದ ಜಗದೀಶ್ ಅವರು ಪ್ರತಿಕ್ರಿಯಿಸಿ, ನಾನು ಈಗ ವರ್ಗಾವಣೆಯಾಗಿದ್ದೀನಿ. ನಾನು ಇರುವ ತನಕವು ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.

Facebook Comments

Sri Raghav

Admin