ಥಿಯೇಟರ್, ಮಲ್ಟಿಫ್ಲೆಕ್ಸ್‍ಗಳಲ್ಲಿ ಶೇ.100ರಷ್ಟು ಆಸನಗಳ ಹೆಚ್ಚಳಕ್ಕೆ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ಜ.4- ಸಿನಿಮಾ ಥಿಯೇಟರ್‍ಗಳು ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲಿ ಶೇ.50ರಿಂದ 100ರಷ್ಟು ಆಸನಗಳ ಸಾಮಥ್ರ್ಯವನ್ನು ಹೆಚ್ಚಿಸಬೇಕೆಂದು ತಮಿಳುನಾಡು ಸರ್ಕಾರ ಇಂದು ಸೂಚನೆ ನೀಡಿದೆ.  ಬ್ರಿಟನ್ ರೂಪಾಂತರಿ ವೈರಸ್ ದೇಶಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಸೋಂಕು ತಡೆಗಟ್ಟಲು ಸಿನಿಮಾ ಥಿಯೇಟರ್‍ಗಳು, ಮಲ್ಟಿಫ್ಲೆಕ್ಸ್‍ಗಳಲ್ಲಿ ಈಗಿರುವ ಆಸನಗಳ ಸಾಮಥ್ರ್ಯಕ್ಕಿಂತ ಶೇ. 50ರಿಂದ 100ಕ್ಕೇರಿಸಲು ಅನುಮತಿ ನೀಡಿದೆ.

ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನದಲ್ಲಿ 867 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಇನ್ನೂ 10 ಸಾವುನೋವು ದಾಖಲಾಗಿವೆ. ಸಿನಿಮಾ ಥಿಯೇಟರ್, ಮಾಲ್‍ಗಳಲ್ಲಿ ಅತ್ಯಧಿಕವಾಗಿ ಜನರು ಆಗಮಿಸುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ಕೋವಿಡ್ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯ. ಇದರಿಂದ ಆಸನಗಳ ಸಂಖ್ಯೆ ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದೆ.

ಇಲ್ಲಿನ ಐಷಾರಾಮಿ ಹೋಟೆಲ್‍ವಂದರ ಸಿಬ್ಬಂದಿ ಸೇರಿದಂತೆ 85 ಮಂದಿಗೆ ಕೋವಿಡ್ ಪಾಸಿಟವ್ ಕಂಡುಬಂದಿದೆ. ಮತ್ತೊಂದು ಸ್ಟಾರ್ ಹೋಟೆಲ್‍ನ 20 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. 232 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು. ಇನ್ನೂ 100 ಮಂದಿಯ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೆನ್ನೈನಲ್ಲಿ 236 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅರಿಯಲೂರು ಮತ್ತು ಪೆರಂಬಲೂರು ಜಿಲ್ಲೆಗಳು ಕೋವಿಡ್‍ಮುಕ್ತಗೊಂಡಿವೆ. ಇತರ ಜಿಲ್ಲೆಗಳಲ್ಲಿ ಒಂದೆರಡು ಪ್ರಕರಣಗಳಷ್ಟೇ ವರದಿಯಾಗಿವೆ ಆರೋಗ್ಯ ಇಲಾಖೆ ತಿಳಿಸಿದೆ.

Facebook Comments