ಮನೆ ಕಳ್ಳತನ: ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ಹಾಡಹಗಲೇ ಮನೆಬೀಗ ಮೀಟಿ ಆಭರಣಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಮಹಿಳಾ ಆರೋಪಿಯನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿ 6.46 ಲಕ್ಷ ರೂ. ಬೆಲೆಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆನೆಪಾಳ್ಯ ನಿವಾಸಿ ನಗ್ಮಾ(24) ಬಂತ ಆರೋಪಿ.

ಈಕೆಯ ಬಂಧನದಿಂದ ಚಂದ್ರಲೇಔಟ್ ಠಾಣೆಯ 3 ಕನ್ನಕಳವು ಪ್ರಕರಣಗಳು ಮತ್ತು 2 ಮನೆ ಕಳವು ಪ್ರಕರಣಗಳಿಗೆ ಸಂಬಂಸಿದಂತೆ 210 ಗ್ರಾಂ ತೂಕದ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್ 13ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಚಂದ್ರಲೇಔಟ್ ವ್ಯಾಪ್ತಿಯ ಅತ್ತಿಗುಪ್ಪೆ, ಆರ್‍ಪಿಸಿಲೇಔಟ್ ನಿವಾಸಿ ಮನೆಗೆ ಬೀಗ ಹಾಕಿಕೊಂಡು ಗವಿಪುರಂಗೆ ಹೋಗಿ ವಾಪಸ್ 1.30ರಲ್ಲಿ ವಾಪಸ್ಸಾಗುವಷ್ಟರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.

ಈ ಬಗ್ಗೆ ಚಂದ್ರಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಚಂದ್ರಲೇಔಟ್ ಠಾಣೆ ಇನ್‍ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ಹಾಗೂ ಸಿಬ್ಬಂದಿ ಫೆ.18ರಂದು ಆರೋಪಿಗಳಾದ ನಯಾಜ್‍ಖಾನ್ ಮತ್ತು ಅಪ್ಸರ್ ಅಹಮ್ಮದ್ ಎಂಬುವರನ್ನು ಬಂಸಿ 69 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದರು.

ಆರೋಪಿ ನಗ್ಮಾ ಪತ್ತೆ ಕಾರ್ಯ ಮುಂದುವರೆಸಿದ್ದ ಪೊಲೀಸರು ನ.23ರಂದು ಬಂಸಿ ಉಳಿದ ಆಭರಣಗಳನ್ನು ನಶಪಡಿಸಿಕೊಂಡಿದ್ದಾರೆ.
ಈಕೆ ಈ ಹಿಂದೆ ಎಚ್‍ಎಎಲ್ ಮತ್ತು ಬನಶಂಕರಿ ಠಾಣೆಗಳಲ್ಲಿನ ಪ್ರಕರಣಗಳಲ್ಲಿ ಬಂತಳಾಗಿದ್ದಳು.

Facebook Comments