ಕಾಣಿಕೆ ಹುಂಡಿ ಕದ್ದಿದ್ದ ಅಪ್ರಾಪ್ತ ಬಾಲಕನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಅ.18- ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಾಣಿಕೆ ಸಂಗ್ರಹಕ್ಕಾಗಿ ಇಡಲಾಗಿದ್ದ ಕಾಣಿಕೆ ಹುಂಡಿಯನ್ನು ಕದ್ದಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕಸರ್ವದಾವಳಿ ಪೊಲೀಸ್ ಠಾಣೆಯ ಘೋದಬುಂದರ್ ರಸ್ತೆಯ ವಸತಿ ಸಂಕೀರ್ಣದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಪೆಂಡಾಲ್‍ನಲ್ಲಿ ನವರಾತ್ರಿ ಉತ್ಸವಕ್ಕಾಗಿ ಹಣ ಸಂಗ್ರಹಿಸಲು ಕಾಣಿಕೆ ಹುಂಡಿ ಇಡಲಾಗಿತ್ತು.

ಅದು ಅಕ್ಟೋಬರ್ 14 ಮತ್ತು 15 ರ ಮಧ್ಯ ರಾತ್ರಿ ಪ್ರಾರ್ಥನಾ ಸ್ಥಳದಿಂದ ಕಳ್ಳತನವಾಗಿತ್ತು. ಸಣ್ಣ ಸುಳಿವು ಆಧರಿಸಿ ಪೊಲೀಸರು 16 ವರ್ಷದ ಬಾಲಕನನ್ನು ಬಂಧಿಸಿದ್ದಾರೆ.

ಬಾಲಕ ಕಾಣಿಕೆ ಹುಂಡಿಯಲ್ಲಿದ್ದ 3,500 ರೂ.ಗಳನ್ನು ತೆಗೆದುಕೊಂಡು, ಕಾಣಿಕೆ ಹುಂಡಿಯನ್ನು ಸ್ಕ್ರಾಪ್ ಡಿಲರ್‍ಗೆ ಮಾರಾಟ ಮಾಡಲು ಪ್ರಯತ್ನಿಸಿದ್ದ. ಈ ವೇಳೆ ಬಾಲಕನನ್ನು ಬಂಧಿಸಲಾಗಿದೆ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ರಿಮ್ಯಾಂಡ್ ಹೋಂಗೆ ಬಿಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಕಿಶೋರ್ ಖೈರನರ್ ತಿಳಿಸಿದ್ದಾರೆ.

Facebook Comments