ಡ್ಯಾಕ್ಸ್ ಹುಂಡ್ ಜಾತಿಯ ಶ್ವಾನಗಳಿಗಾಗೇ ತೆರೆದ ವಿಶೇಷ ಕಾಫಿ ಶಾಪ್..! ಹೇಗಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Ds

ಜರ್ಮನ್ನರ ಅಚ್ಚುಮೆಚ್ಚಿನ ಶ್ವಾನ ಡ್ಯಾಕ್ಸ್ ಹುಂಡ್‍ಗಾಗಿಯೇ ವಿಶೇಷ ಮ್ಯೂಸಿಯಂ ಆರಂಭವಾದ ಸುದ್ದಿಯ ಬೆನ್ನಲ್ಲೇ ಇಂಗ್ಲೆಂಡ್‍ನಲ್ಲಿ ಈ ಜಾತಿಯ ನಾಯಿಗಳಿಗಾಗಿಯೇ ಕಾಫಿ ಶಾಪ್ ತೆರೆಯಲಾಗಿದೆ. ಇದು ಇಂಗ್ಲೆಂಡ್‍ನ ಪ್ರಥಮ ಶ್ವಾನ ಕೆಫೆ ಕೇಂದ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದು ಲಂಡನ್‍ನ ಡ್ಯಾಕ್ಸ್ ಹುಂಡ್ ಕೆಫೆಯಲ್ಲಿ ಕಂಡು ಬಂದ ನೋಟ. ಈ ಕೆಫೆ ಈಗ ಕುಳ್ಳ ನಾಯಿಗಳು ಮತ್ತು ಅವುಗಳ ಮಾಲೀಕರ ಅಚ್ಚುಮೆಚ್ಚಿನ ತಾಣವಾಗಿದೆ. ಇಂಗ್ಲೆಂಡ್ ರಾಜಧಾನಿಯ ಲಂಡನ್‍ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ಬಳಿ ಆರಂಭವಾಗಿರುವ ಈ ಕಾಫಿ ಕೇಂದ್ರದ ಉದ್ಘಾಟನಾ ಸಮಾರಂಭ ವಿಶೇಷವಾಗಿತ್ತು. ಇಲ್ಲಿಗೆ ಭೇಟಿ ನೀಡಿದ ಎಲ್ಲ ಶ್ವಾನಗಳಿಗೆ ಪುಪುಸಿನೋಸ್ ಮತ್ತು ಪಾಪ್‍ಕಾರ್ನ್‍ಗಳನ್ನು ಉಚಿತವಾಗಿ ನೀಡಲಾಯಿತು.

Ds-1

ಇಲ್ಲಿ ಶ್ವಾನಗಳಿಗೆ ಪ್ರಿಯವಾದ ಆಹಾರಗಳು, ಐಸ್‍ಕ್ರೀಮ್‍ಗಳು ಮತ್ತು ಪೇಯಗಳು ಲಭಿಸುತ್ತವೆ. ನಾಯಿಗಳಿಗಾಗಿ ಇಲ್ಲಿ ಅವುಗಳ ಮಾಲೀಕರು ಪಾರ್ಟಿಗಳನ್ನೂ ಸಹ ಆಯೋಜಿಸ ಬಹುದು ಎನ್ನುತ್ತಾರೆ ಕೆಫೆ ಒಡತಿ ಅನುಷ್ಕಾ ಫರ್ನಾಂಡೋ. ಡ್ಯಾಕ್ಸ್‍ಹುಂಡ್-ಇದು ಗಿಡ್ಡ ಕಾಲುಗಳ, ಉದ್ದ ಶರೀರ ಉಳ್ಳ, ಕಪ್ಪು ಅಥವಾ ಕಂದು ಬಣ್ಣವಿರುವ ಜರ್ಮನಿಯ ಅಚ್ಚುಮೆಚ್ಚಿನ ಶ್ವಾನ. ಇದನ್ನು ಸಾಸೇಜ್ ಡಾಗ್ ಎಂದೂ ಕರೆಯಲಾಗುತ್ತದೆ.  ಜರ್ಮನಿ ದಕ್ಷಿಣ ನಗರ ಬವಾರಿಯಾದ ಪಸ್ಸಾವುದಲ್ಲಿ ಈ ನಾಯಿಗಾಗಿಯೇ ಒಂದು ವಿಶೇಷ ಮ್ಯೂಸಿಯಂ ಪ್ರಾರಂಭವಾಗಿದೆ. ಇದು ಶ್ವಾನಕ್ಕೆ ಸಂಬಂಧಪಟ್ಟ ಜಗತ್ತಿನ ಮೊಟ್ಟ ಮೊದಲ ಶ್ವಾನ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಇದರ ಹಿಂದೆಯೇ ಈ ಜಾ ತಿಯ ನಾಯಿಗಳಿಗಾಗಿಯೇ ಇಂಗ್ಲೆಂಡ್‍ನಲ್ಲಿ ತೆರೆಯಲಾಗಿರುವ ಪುಗ್-ಕೆಫೆ, ದೇಶದ ಪ್ರಥಮ ಶ್ವಾನ ಕೆಫೆ ಕೇಂದ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿಶ್ವದಲ್ಲಿ ಡ್ಯಾಕ್ಸ್ ಹುಂಡ್ ಶ್ವಾನಗಳಿಗಾಗಿಯೇ ಆರಂಭವಾಗಿರುವ ಐದನೆ ಶಾಪ್ ಇದಾಗಿದೆ.

Ds-2

ಜರ್ಮನಿಯ ಮ್ಯೂಸಿಯಂನಲ್ಲಿ ನಾಯಿ ಆಕಾರದ ಬ್ರೇಡ್‍ನಿಂದ ಹಿಡಿದು ಚಿನ್ನದ ಲೇಪನ ಇರುವ ದೊಡ್ಡ ಶ್ವಾನ ಪ್ರತಿಮೆಗಳವರೆಗೂ 2,000ಕ್ಕೂ ಹೆಚ್ಚು ವಸ್ತುಗಳಿವೆ. ಎಲ್ಲವೂ ಡ್ಯಾಕ್ಸ್‍ಹುಂಡ್‍ಗೆ ಸಂಬಂಧಪಟ್ಟವೇ ಆಗಿದೆ. ಈಗ ಈ ಶ್ವಾನಗಳಿಗಾಗಿಯೇ ವಿಶ್ವದ ವಿವಿಧೆಡೆ ಕೆಫೆ ಕೇಂದ್ರಗಳು ಆರಂಭವಾಗಿರುವುದು ಇದರ ಜನಪ್ರಿಯತೆಗೆ ನಿದರ್ಶನವಾಗಿದೆ.  ಅತ್ಯಂತ ಪ್ರಾಚೀನ ತಳಿ ಯಾದ ಈ ಬುದ್ದಿವಂತ ಕುಳ್ಳ ನಾಯಿ ಯನ್ನು ಮಧ್ಯಯುಗದಲ್ಲಿ ಬೇಟೆ ಗಾರರು ವನ್ಯಜೀವಿಗಳ ಸುಳಿವು ಪತ್ತೆ ಮಾಡಲು ಬಳಸುತ್ತಿದ್ದರು.

Facebook Comments

Sri Raghav

Admin