ಭಾರಿ ಬೆಲೆಗೆ ಹರಾಜಾಯ್ತು ಜೇಮ್ಸ್ ಬಾಂಡ್ ಕಾರು..!

ಈ ಸುದ್ದಿಯನ್ನು ಶೇರ್ ಮಾಡಿ

ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಳಸಲಾದ ವಾಹನಗಳು ಮತ್ತು ಇತರ ಗ್ಯಾಡ್ಜೆಟ್‍ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಮೌಲ್ಯ. 1965ರ ಆಸ್ಟಮ್ ಮಾರ್ಟಿನ್ ಡಿಬಿ-5 ಕಾರು ಹರಾಜಿನಲ್ಲಿ ಭರ್ಜರಿ ಬೆಲೆಗೆ ಮಾರಾಟವಾಗಿದೆ.

ಬ್ರಿಟಿಷ್ ಸಿಕ್ರೇಟ್ ಏಜೆಂಟ್ ಜೇಮ್ಸ್ ಬಾಂಡ್-007 ಸಿನಿಮಾಗಳಲ್ಲಿ ಬಳಸಿದ್ದ 1965ರ ಆಸ್ಟನ್ ಮಾರ್ಟಿನ್ ಡಿಬಿ-5 ಕಾರು ನಿರೀಕ್ಷೆಗೂ ಮೀರಿದ ಬೆಲೆಗೆ ಬಿಕರಿಯಾಗಿದೆ. ಅಮೆರಿಕದ ಆರ್‍ಎಂ ಸೋಥೆಬೀಸ್ ಮ್ಯೂಸಿಯಂನಲ್ಲಿ 6.38 ದಶಲಕ್ಷ ಡಾಲರ್‍ಗಳ ಭಾರೀ ಮೌಲ್ಯಕ್ಕೆ ಜೇಮ್ಸ್ ಬಾಂಡ್ ಕಾರು ಮಾರಾಟವಾಗಿದೆ.

ಈ ಕಾರನ್ನು ಜೇಮ್ಸ್ ಬಾಂಡ್ ಪಾತ್ರಧಾರಿಯಾಗಿ ಸೀನ್ ಕ್ಯಾನರಿ ನಟಿಸಿದ್ದ ಗೋಲ್ಡ್‍ಫಿಂಗರ್ ಮತ್ತು ಥಂಡರ್‍ಬಾಲ್ ಸಿನಿಮಾಗಳಲ್ಲಿ ಬಳಸಲಾಗಿತ್ತು. ಬಾಂಡ್ ಸಿನಿಮಾಕ್ಕಾಗಿಯೇ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸ ಲಾಗಿತ್ತು. ಇದರಲ್ಲಿ ಪಾಯಿಂಟ್ 30 ಮೆಷಿನ್ ಗನ್, ಟೈರ್ ಒಡೆದು ಹಾಕುವ ಸಾಧನ ಮತ್ತು ಗುಂಡು ನಿರೋಧಕ ಕವಚವನ್ನು ಅಳವಡಿಸಲಾಗಿತ್ತು.

ಬೂದು ಬಣ್ಣದ ಈ ಕಾರು ಹರಾಜಿನಲ್ಲಿ 4 ದಶಲಕ್ಷ ಡಾಲರ್‍ಗಳಿಂದ 6 ದಶಲಕ್ಷ ಡಾಲರ್‍ಗಳವರೆಗೆ ಮಾರಾಟವಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ 6.38 ದಶಲಕ್ಷ ಡಾಲರ್‍ಗಳಿಗೆ ಜೇಮ್ಸ್ ಬಾಂಡ್ ಕಾರು ಬಿಕರಿಯಾಗಿದೆ.

ಆಸ್ಟನ್ ಮಾರ್ಟಿನ್ ಡಿಬಿ-5 ಕಾರು ನಿರ್ಮಾಣವಾಗಿ 54 ವರ್ಷಗಳಾಗಿದ್ದರೂ ಇದರ ಜನಪ್ರಿಯತೆಗೆ ಈ ಹರಾಜು ಸಾಕ್ಷಿಯಾಗಿದೆ.

Facebook Comments