ವೋಟಿಗಾಗಿ ಚರಂಡಿ ನೀರು ಕುಡಿದ ಮಾಹಾನುಭಾವ..!

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ಕರಾಚಿ. ಜು. 02 : ರಾಜಕೀಯ ನಾಯಕರು ವೋಟಿಗಾಗಿ ಮಾಡುವ ಡ್ರಾಮಾಗಳು ನಿಮಗೆ ಗೊತ್ತೇ ಇದೆ, ಭಾರತದಲ್ಲಿ ಅಷ್ಟೇ ಎಲ್ಲಾ ದೇಶದಲ್ಲೂ ಇದು ಮಾಮೂಲಿ. ಆದರೆ ಪಾಕಿಸ್ತಾನದಲ್ಲೊಬ್ಬ ಆಸಾಮಿ ವೋಟಿಗಾಗಿ ಏನು ಮಾಡಿದ ಎಂಬುದು ತಿಳಿದರೆ ನಿಮಗೆ ನಿಜಕ್ಕೂ ಶಾಕ್ ಆಗುತ್ತೆ.  ಪಾಕಿಸ್ತಾನದಲ್ಲೀಗ ಚುನಾವಣಾ ಕಾವು ಜೋರಾಗಿದೆ. ಜುಲೈನಲ್ಲಿ ನಡೆಯುವ ಚುನಾವಣೆಗೆ ಅಲ್ಲಿನ ಪಕ್ಷೇತರ ಅಭ್ಯರ್ಥಿಯೊಬ್ಬ ಕಸದ ರಾಶಿಗಳ ಮೇಲೆ ಕೂತು, ಚರಂಡಿ ನೀರಿನಲ್ಲಿ ಮೇಲೆ ಮಲಗಿ, ರಸ್ತೆಯ ಗುಂಡಿಯೊಳಗೆ ಹೊರಳಾಡಿ ವೋಟು ಕೇಳಿದ ಫೋಟೋಗಳು ಈಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಆತನ ಹೆಸರು ಅಯಾಜ್ ಮೆಮನ್ ಮೋಟಿವಾಲ.

ಈ ಮಹಾನುಭಾವ ಚರಂಡಿಯಲ್ಲೋ ಬಿದ್ದು ಹೊರಳಾಡೋದಷ್ಟೇ ಅಲ್ಲ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಚರಂಡಿ ಬಳಿ ಕೂತು ಊಟ ಮಾಡಿದ್ದಲ್ಲದೆ, ಚರಂಡಿಯ ನೀರನ್ನೇ ಕುಡಿದು ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದಾನೆ. ಈ ಮೂಲಕ ಕಸ, ಚರಂಡಿ, ರಸ್ತೆ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾನೆ ಅಯಾಜ್.

Facebook Comments

Sri Raghav

Admin