178 ವರ್ಷಗಳ ಇತಿಹಾಸ ಹೊಂದಿದ್ದ ವಿಶ್ವ ವಿಖ್ಯಾತ ಪ್ರವಾಸಿ ಸಂಸ್ಥೆ ಥಾಮಸ್ ಕುಕ್ ಪತನ..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಸೆ.23(ಪಿಟಿಐ)- ವಿಶ್ವ ವಿಖ್ಯಾತ ಪ್ರವಾಸಿ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ 178 ವರ್ಷಗಳಷ್ಟು ಹಳೆಯದಾದ ಬ್ರಿಟನ್ ಥಾಮಸ್ ಕುಕ್ ದಿವಾಳಿಯಾಗಿದ್ದು, ಇಂದು ಬೆಳಗ್ಗೆ ಅಧಿಕೃತವಾಗಿ ಪತನಗೊಂಡಿದೆ.  ಈ ಬೆಳವಣಿಗೆಯಿಂದ ಇಂಗ್ಲೆಂಡ್‍ನ ಪ್ರತಿಷ್ಟಿತ ಸಂಸ್ಥೆಯ 21ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.

ಇನ್ನೊಂದೆಡೆ ಈ ಪ್ರವಾಸಿ ಸಂಸ್ಥೆಯ ಮೂಲಕ ವಿಶ್ವಾದ್ಯಂತ ವಿವಿಧ ದೇಶಗಳಲ್ಲಿ ಪ್ರವಾಸದಲ್ಲಿರುವ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಸ್ಥಿತಿ ಅತಂತ್ರವಾಗಿದೆ. ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ, ಈ ಸಂಸ್ಥೆಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಬ್ರಿಟನ್ ಸರ್ಕಾರ ನಡೆಸಿದ ಕಟ್ಟಕಡೆಯ ಪ್ರಯತ್ನ ವಿಫಲಗೊಂಡಿತು. ಹಣಕಾಸು ಮುಗ್ಗಟ್ಟಿನಿಂದ ಪಾರಾಗಲು ಕೋಟ್ಯಂತರ ಪೌಂಡ್‍ಗಳ ತುರ್ತು ಪರಿಹಾರ ಪಡೆಯುವಲ್ಲಿ ಥಾಮಸ್ ಕುಕ್ ವಿಫಲವಾಗಿ ಒಂದು ಮುಕ್ಕಾಲು ಶತಮಾನದ ಸುದೀರ್ಘ ಇತಿಹಾಸ ಹೊಂದಿರುವ ಈ ಸಂಸ್ಥೆ ಅಧಿಕೃತ ದಿವಾಳಿತನದೊಂದಿಗೆ ಇಂದು ಬೆಳಗ್ಗೆ ನೆಲಕಚ್ಚಿದೆ.

Facebook Comments