ಥಾಮಸ್ ಕಪ್ ಬ್ಯಾಡ್ಮಿಂಟನ್ ಪಂಡ್ಯಾವಳಿ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಜಕಾರ್ತ,ಸೆ.12- ಮುಂದಿನ ತಿಂಗಳು ಡೆನ್ಮಾರ್ಕ್‍ನಲ್ಲಿ ನಡೆಯಲಿರುವ ದಕ್ಷಿಣ ಕೊರಿಯಾ ಮತ್ತು ಇಂಡೋನೇಷ್ಯಾ ನಡುವಿನ ಥಾಮಸ್ ಮತ್ತು ಉಬರ್ ಕಪ್ ಫೈನಲ್ ಪಂದ್ಯವನ್ನು ಆಡುವುದಿಲ್ಲ ಎಂದು ಬ್ಯಾಡ್ಮಿಂಟನ್ ವಲ್ರ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್)ತಿಳಿಸಿದೆ.

ಇದರ ನಡುವೆಯೇ ಬರುವ ಅಕ್ಟೋಬರ್ 3-11ರಂದು ನಡೆಯಬೇಕಿದ್ದ ಪಂದ್ಯಾವಳಿಯಿಂದ ಆಸ್ಟ್ರೇಲಿಯಾ, ತೈವಾನ್ ಮತ್ತು ಥೈಲ್ಯಾಂಡ್ ದೇಶಗಳು ಕೂಡ ಹಿಂದೆ ಸರಿದಿವೆ. ಈ ಪ್ರತಿಷ್ಠಿತ ಪಂದ್ಯಾವಳಿಯ ಇತಿಹಾಸದಲ್ಲಿ ಪುರುಷರ ವಿಭಾಗದಲ್ಲಿ ಇಂಡೋನೇಷ್ಯಾ 13 ಬಾರಿ ಮತ್ತು ಮಹಿಳಾ ವಿಭಾಗದಲ್ಲಿ ಉಬರ್ ಕಪ್‍ನ್ನು ಮೂರು ಬಾರಿ ಗೆದ್ದಿದೆ.

Facebook Comments