ದರ್ಶನ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಜೈ ತೂಗುದೀಪ್ ಆಲ್ಬಂ ಸಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.5-ನಟ ತೂಗುದೀಪ್ ಶ್ರೀನಿವಾಸ್ ಕನ್ನಡ ಚಿತ್ರರಂಗದ ಮರೆಯಲಾಗದ ರತ್ನ. ಖಳನಟನಾಗಿ ತಮ್ಮ ಅಭಿನಯದ ಚತುರತೆಯಿಂದ ಕಂಚಿನ ಕಂಠದಿಂದ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು. ಇವರು ನಮ್ಮನ್ನಗಲಿ ಇಂದಿಗೆ 24ವರ್ಷ ಕಳೆದಿದೆ.

ದರ್ಶನ್ ಪುತ್ರನ ಹುಟ್ಟುಹಬ್ಬದ ಸಂದರ್ಭದಲ್ಲಿ ಇವರ ನೆನಪನ್ನು ಮರುಕಳಿಸುವಂತೆ ತೂಗುದೀಪ್ ಡೈನಾಸ್ಟಿ ತಂಡ ಆಲ್ಬಂ ಸಾಂಗ್‌ವೊಂದನ್ನು ಹೊರತಂದಿದೆ. ಈಗ ಅದು ಜನರ ಮನಗೆದ್ದಿದೆ. ತೂಗ್‌ದೀಪ್ ಶ್ರೀನಿವಾಸ್ ಹೆಸರಿನಲ್ಲಿ ಆಲ್ಬಂ ಸಾಂಗ್ ಹೊರಬಂದಿರುವುದು ಇದೇ ಪ್ರಥಮ ಎಂಬ ಹೆಗ್ಗಳಿಕೆಯೂ ಪಾತ್ರವಾಗಿದೆ. ಪ್ರಮೋದ್ ಜೋಯಿಸ್ ಸಾಹಿತ್ಯ, ಅಕ್ಷಯ್ ಸಂಗೀತ, ಗುರುಪ್ರಸಾದ್ ಸಂಕಲನವಿದ್ದು, ಸರಿಗಮಪ ಅರವಿಂದ್ ಹಾಡಿದ್ದಾರೆ.

ಜೊತೆಗಿರದ ಜೀವವೇ ಎಂದೂ ಜೀವಂತ…. ಸಾಲಿನೊಂದಿಗೆ ಆರಂಭವಾಗುವ ಈ ಹಾಡು ತೂಗುದೀಪ್‌ಶ್ರೀನಿವಾಸ್ ಕುರಿತು ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಸದರಿ ಹಾಡಿನ ಸಾಹಿತ್ಯ ಪ್ರಮೋದ್ ಜೋಯಿಸ್ ಅವರದು. ನಟ ದರ್ಶನ್ ತೂಗುದೀಪ್, ತೂಗುದೀಪ್ ಶ್ರೀನಿವಾಸ್ ಅವರ ಪತ್ನಿ ಮೀನಾ ಸೇರಿದಂತೆ ಅಭಿಮಾನಿಗಳು ಹಾಡು ಕೇಳಿ ಇಡೀ ತಂಡದ ಪ್ರಯತ್ನವನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವಸೈನ್ಯ ತಂಡ ಹೊರತಂದಿದ್ದ ಪ್ರಮೋದ್ ಜೋಯಿಸ್ ಸಾಹಿತ್ಯದ ಮಹಾನ್ ಕಲಾವಿದ ಸಾಂಗ್ ಕೂಡ ಅಭಿಮಾನಗಳ ಮನ ಗೆದ್ದಿತ್ತು.

Facebook Comments