3 ಬಾರಿ ಆತ್ಮಹತ್ಯೆಗೆ ಮುಂದಾಗಿದ್ದ ಬೌಲರ್ ಮಹಮ್ಮದ್ ಶಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 3- ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಭಾವನೆ ಮೂರು ಬಾರಿ ನನ್ನ ಮನಸ್ಸಿನಲ್ಲಿ ಸುಳಿದಾಡಿತ್ತು ಎಂದು ಭಾರತದ ಖ್ಯಾತ ಬೌಲರ್ ಮಹಮ್ಮದ್ ಶಮಿ ಬಹಿರಂಗಗೊಳಿಸಿದ್ದಾರೆ.

ನಾವಿದ್ದ ಅಪಾರ್ಟ್‍ಮೆಂಟ್‍ನ 24ನೆ ಮಹಡಿಯಿಂದ ನಾನು ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬಹುದೆಂಬ ಆತಂಕದಿಂದ ಮನೆಯ ಸದಸ್ಯರು ನನ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು ಎಂಬ ಸಂಗತಿಯನ್ನು ಸಹ ವೇಗದ ಬೌಲರ್ 29 ವರ್ಷದ ಶಮಿ ತಿಳಿಸಿದ್ದಾರೆ.

ಭಾರತದ ಸ್ಟಾರ್ ಬ್ಯಾಟ್ಸ್‍ಮನ್ ರೋಹಿತ್ ಶರ್ಮ ಅವರೊಂದಿಗೆ ಇನ್‍ಸ್ಟ್ರಾಗ್ರಾಂ ಚಾಟ್‍ನಲ್ಲಿ ಈ ವಿಷಯವನ್ನು ಶಮಿ ಬಹಿರಂಗಗೊಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ನನ್ನ ಕುಟುಂಬದಲ್ಲಿ ತುಂಬಾ ಸಮಸ್ಯೆ ಇತ್ತು. ನನ್ನ ಕ್ರಿಕೆಟ್ ವೃತ್ತಿಗೂ ಇದರಿಂದ ಅಡ್ಡಿಯಾಗಿತ್ತು.

ಈ ಎಲ್ಲ ಕಾರಣಗಳಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮೂರು ಬಾರಿ ಯೋಚಿಸಿದ್ದೆ. 24ನೆ ಮಹಡಿಯಿಂದ ಕೆಳಗೆ ಹಾರಬೇಕೆಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಸುಳಿದಾಡಿತ್ತು ಎಂದು ಶಮಿ ಹೇಳಿಕೊಂಡಿದ್ದಾರೆ.

Facebook Comments

Sri Raghav

Admin