ಪ್ರತ್ಯೇಕ ಅಪಘಾತ, ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ನಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ 14 ವರ್ಷದ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಕ್ಕಿ ಬಳಿ ರಾತ್ರಿ 1 ಗಂಟೆ ಸಂದರ್ಭದಲ್ಲಿ ಬೈಕ್ ಹಾಗೂ ಬುಲೆಟ್ ನಡುವೆ ಡಿಕ್ಕಿ ಸಂಭವಿಸಿ ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಸಿಖಂದರ್ ಮತ್ತು ಸನರುಲ್ಲಾ ಎಂಬುವರು ನಿನ್ನೆ ರಾತ್ರಿ ಸಂಬಂಧಿಕರ ಮನೆಗೆ ತೆರಳಿ ವಾಪಸಾಗುವಾಗ ಫಿರೋಜ್ ಮತ್ತು ಅವರ ಪತ್ನಿ ಬರುತ್ತಿದ ಬುಲೆಟ್‍ಗೆ ಪರಸ್ಪರ ಡಿಕ್ಕಿ ಸಂಭವಿಸಿದೆ.

ಇದರಿಂದ ನಾಲ್ವರೂ ಗಾಯಗೊಂಡಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಬೈಕ್ ಹಿಂದೆ ಕೂತಿದ್ದ ಸಿಖಂದರ್ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಆರ್‍ಎಂಸಿಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಲೆಜಿ ಪ್ಯಾಕ್ಟರಿ ಬಳಿ ಕಾರೊಂದು ಸ್ಕೂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಬಾಲಕ ರಸ್ತೆಗೆ ಉರುಳಿ ಬಿದಿದ್ದರಿಂದ ಅವನ ಮೇಲೆ ಕೆಎಸ್‍ಆರ್‍ಟಿಸಿ ಬಸ್ ಅರಿದು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

ಮೃತನನ್ನು ಮಂಜುನಾಥನಗರದ ವಿನಾಯಕ (14) ಎಂದು ತಿಳಿದು ಬಂದಿದೆ. ಇವರ ಪಕ್ಕದ ಮನೆಯ ರಘು ಎಂಬುವರ ಜತೆ ಸ್ಕೂಟರ್‍ನಲ್ಲಿ ಈತ ಬರುತ್ತಿದ್ದಾಗ ಕಾರೊಂದು ಇವರಿಗೆ ಡಿಕ್ಕಿ ಹೊಡೆದಿದೆ.

ಬಾಲಕ ರಸ್ತೆಯ ಎಡಭಾಗಕ್ಕೆ ಬಿದಿದ್ದು, ಹಿಂದಿನಿಂದ ಬರುತ್ತಿದ್ದ ಬಸ್ ಆತನ ಮೇಲೆ ಅರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ.
ಆರ್‍ಎಂಸಿಯಾರ್ಡ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Facebook Comments