ಕಾರು ಪ್ರಪಾತಕ್ಕೆ ಬಿದ್ದು ಮೂವರ ಸಾವು, ಓರ್ವ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಶಿರಾ,ಜೂ.29- ಕಾರೊಂದು ಅರಣ್ಯಪ್ರದೇಶದ 30 ಅಡಿ ಪ್ರಪಾತಕ್ಕೆ ಉರುಳಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊನ್ನಹಳ್ಳಿ ಬಳಿ ನಡೆದಿದೆ.  ತಾಲ್ಲೂಕಿನ ಬರಗೂರಿನ ಬಸವರಾಜ್(28), ವಿನಯ್(29),ಸುಮನ್ ಬಾಬು(30) ಮೃತಪಟ್ಟವರು ಎಂದು ತಿಳಿದುಬಂದಿದ್ದು, ನೂತನ್ ಎಂಬುವರು ಗಂಭೀರವಾಗಿ ಗಾಯಗೊಂಡು ಅವರ ಸ್ಥಿತಿಯೂ ಕೂಡ ಚಿಂತಾಜನಕವಾಗಿದೆ.

ಇದೇ ವೇಳೆ ಕಾರಿನಲ್ಲಿದ್ದ ಸಚಿನ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಚ್ಚರಿ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಸ್ನೇಹಿತರಾದ ಇವರೆಲ್ಲರೂ ಬುಕ್ಕಾಪಟ್ಟಣದ ಮರಡಿಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುವಾಗ ಈ ದುರಂತ ಸಂಭವಿಸಿದೆ.

ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಉರುಳಿಬಿದ್ದಿದೆ ಎಂದು ಹೇಳಲಾಗಿದೆ.
ಶಿರಾ ಟೌನ್ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments