ಅಮೇರಿಕಾದಲ್ಲಿ ಮೂವರು ಭಾರತೀಯರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಡಿ.4- ಭಾರತಕ್ಕೆ ಗಡಿಪಾರಾಗಿದ್ದ ಮೂವರು ಭಾರತೀಯರನ್ನು ವರ್ಜಿನ್ ಐಲ್ಯಾಂಡ್ಸ್‍ಗೆ ಪ್ರವೆದ್ಸಿದ್ದಕ್ಕಾಗಿ ಮತ್ತೊಮ್ಮೆ ಬಂಧಿಸಲಾಗಿದೆ ಎಂದು ಅಮೆರಿಕದ ವಕೀಲರೊಬ್ಬರು ತಿಳಿಸಿದ್ದಾರೆ.

ಕೃಷ್ಣಾ ಬೆನ್ ಪಟೇಲ್(25), ನಿಕುಂಜ್‍ಕುಮಾರ್ ಪಟೇಲ್(27) ಮತ್ತು ಅಶೋಕ್‍ಕುಮಾರ್ ಪಟೇಲ್(39) ಅವರು ನವೆಂಬರ್ 24ರಂದ ಫ್ಲಾರಿಡಾದ ಫೋರ್ಟ್ ಲಾಡರ್‍ಡೇಲ್‍ಗೆ ತೆರಳುವ ವಿಮಾವವೇರಲಿದ್ದಾಗ ಅವರನ್ನು ಅಮೆರಿಕದ ವರ್ಜಿನ್ ಐಲ್ಯಾಂಡ್‍ನಲ್ಲಿನ ಸೆಂಟ್ ಕ್ರಾಯಿಕ್ಸ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಆರೋಪ ಸಾಬೀತಾದಲ್ಲಿ ಅವರು 10 ವರ್ಷ ಸೆರೆವಾಸದ ಶಿಕ್ಷೆ ಮತ್ತು ನಂತರ ಗಡಿಪಾರಿಗೆ ಒಳಗಾಗಲು ಸಾಧ್ಯತೆ ಇರುತ್ತದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ.

Facebook Comments