ಮೂವರು ಅಂತಾರಾಜ್ಯ ಕಳ್ಳರ ಸೆರೆ, 20 ಲಕ್ಷ ರೂ. ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

robbors

ಬೆಂಗಳೂರು, ಜು.17- ಕನ್ನಗಳವು ಮಾಡುತ್ತಿದ್ದ ತಂಡವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಕೋರಮಂಗಲ ಪೊಲೀಸರು, ಮೂವರು ಅಂತಾರಾಜ್ಯ ಕನ್ನಗಳವು ಆರೋಪಿಗಳನ್ನು ಬಂಧಿಸಿ, 20 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ಕೊಟ್ಟಂಪಲ್ಲಿ ಗ್ರಾಮದ ಉಮಾಶಂಕರ್ (30), ಎಲೆಕ್ಟ್ರಾನಿಕ್ ಸಿಟಿಯ ಗೊಲ್ಲಹಳ್ಳಿ ಗೇಟ್ ಜಿ.ಬಿ.ನಿಯಲ ನಿವಾಸಿಗಳಾದ ಶ್ರೀನಿವಾಸ್ (29), ಮಧುಸೂದನ ರೆಡ್ಡಿ (21) ಬಂಧಿತ ಆರೋಪಿಗಳು. ಶ್ರೀನಿವಾಸ್ ಮತ್ತು ರೆಡ್ಡಿ ಆಂಧ್ರಪ್ರದೇಶ ಮೂಲದವರಾಗಿದ್ದು, ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸಿಸುತ್ತಿದ್ದರು.

ಇತ್ತೀಚೆಗೆ ನಗರದ ಆಗ್ನೇಯ ವಿಭಾಗದಲ್ಲಿ ಕನ್ನಗಳವು ಪ್ರಕರಣ ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಡಿಸಿಪಿ ಡಾ.ಬೋರಲಿಂಗಯ್ಯ ಆವರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಈ ಮೂವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ 20 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ, ಒಂದು ಕಾರು, ಎರಡು ಬೈಕ್‍ಗಳು, ಟಿವಿ, ಲ್ಯಾಪ್‍ಟಾಪ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಕೋರಮಂಗಲ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆಗಳ ತಲಾ 2, ಜಿಗಣಿ, ಆನೇಕಲ್ ಠಾಣೆಗಳ ತಲಾ 1 ಪ್ರಕರಣ ಸೇರಿ ಒಟ್ಟು 6 ಮನೆಕನ್ನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳು ದುಷ್ಚಟಗಳ ದಾಸರಾಗಿದ್ದು, ಮನೆ ಕನ್ನ ಕಳವು ಮಾಡಿ ಬಂದ ಹಣವನ್ನು ಮೋಜು ಮಾಡಲು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin