ಮುಂದಿನ ವರ್ಷಗಳಲ್ಲಿ ಕಣ್ಮರೆಯಾಗಲಿವೆ ಅನೇಕ ಸುಂದರ ದ್ವೀಪಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಹೆಚ್ಚುತ್ತಿರುವ ಭೂ ಮಂಡಲದ ಉಷ್ಣಾಂಶ, ಹವಾಮಾನ ವೈಪರೀತ್ಯ ಮತ್ತು ಬದಲಾಗುತ್ತಿರುವ ಭೌಗೋಳಿಕ ಲಕ್ಷಣಗಳು ಕೇವಲ ಮನುಷ್ಯರು ಮತ್ತು ಪ್ರಾಣಿ ಸಂಕುಲಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದಲ್ಲದೆ. ನಿಸರ್ಗಕ್ಕೂ ಅಪಾಯವನ್ನು ತಂದೊಡ್ಡಿದೆ.

ವಾತಾವರಣ ಬದಲಾವಣೆಯಿಂದಾಗಿ ಸಮುದ್ರದೊಳಗೆ ಅಲ್ಲೋಲ-ಕಲ್ಲೋಲ ಉಂಟಾಗಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದು ಕಾಲಕ್ರಮೇಣ ಕರಾವಳಿ ಪ್ರದೇಶದ ನಯನ ಮನೋಹರ ದ್ವೀಪ ಸಮೂಹಗಳನ್ನು ಕಬಳಿಸುತ್ತಿವೆ.

ಈಗಾಗಲೇ ವಿಶ್ವದ ಅನೇಕ ಸಾಗರಪ್ರದೇಶಗಳಲ್ಲಿನ ಸುಂದರ ದ್ವೀಪಗಳು ಇದೇ ಕಾರಣಕ್ಕೆ ಕಣ್ಮರೆಯಾಗುತ್ತಿವೆ. ಈ ವರ್ಷದಲ್ಲೇ ಕಿರಿಬಿಟಿ ದ್ವೀಪಕಲ್ಪದ ಮೂರು ದ್ವೀಪಗಳು ನಾಪತ್ತೆಯಾಗಿವೆ. ಇವುಗಳನ್ನು ನೀಲಸಾಗರದ ಅಗಾದ ಜಲರಾಶಿ ಆಪೋಷಣ ತೆಗೆದುಕೊಂಡಿದೆ.

2016ರಲ್ಲಿ ಪೆಸಿಫಿಕ್ ಮಹಾಸಾಗರ ಪ್ರದೇಶದ ಐದು ದ್ವೀಪಗಳು ಕಣ್ಮರೆಯಾಗಿದೆ. ಇದೇ ಪರಿಸ್ಥಿತಿ ವಿಶ್ವದ ಅನೇಕ ಸಮುದ್ರ ತೀರದ ಪ್ರಾಂತ್ಯಗಳಲ್ಲೂ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಸುಮಾರು ಹದಿಮೂರು ಪ್ರಮುಖ ದ್ವೀಪಗಳು ಸಾಗರಗರ್ಭದಲ್ಲಿ ಹುದುಗಿ ಹೋಗಲಿವೆ ಎಂದು ಪರಿಸರ ಮತ್ತು ಸಾಗರಶಾಸ್ತ್ರ ಪರಿಣಿತರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವ ವಿಖ್ಯಾತ ನಯನ ಮನೋಹರ ದ್ವೀಪ ಪ್ರದೇಶಗಳಾದ ಸೋಲೋಮನ್, ಮಾಲ್ಡಿವ್ಸ್, ಮೈಕ್ರೊನೆಷಿಯಾ, ಫಿಜಿ, ಟುವಲು, ಸಿಚೆಲ್ಸ್, ಕಿರಿಬಿಟಿ, ಕೂಕ್, ಫ್ರೆಂಚ್ ಪಾಲಿನೆಷಿಯಾ, ವರ್ಜಿಯಾನದ ಟ್ಯಾಂಗ್ರೀರ್, ಮಾರ್ಷಲ್ ಹಾಗೂ ಅಲಾಸಕಾದ ಶಿಶ್‍ಮರಿಫ್ ದ್ವೀಪಗಳು ಸಾಗರದಾಳದಲ್ಲಿ ಮುಳುಗಲಿದೆ ಎಂದು ಪರಿಸರವಾದಿಗಳು ಮುನ್ನಚ್ಚರಿಕೆ ನೀಡಿದ್ದಾರೆ.

ಮುಂದಿನ 80 ವರ್ಷಗಳಲ್ಲಿ ವಿಶ್ವದ ಇನ್ನೂ ಅನೇಕ ಸುಂದರ ದ್ವೀಪಗಳು ಭೂಪಟದಿಂದ ಕಣ್ಮರೆಯಾಗಲಿದೆ. ಈಗಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ. ಇವುಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತವೆ ಎಂದು ಪರಿಸರವಾದಿ ವಿಷಾದಿಸಿದ್ದಾರೆ.

Facebook Comments

Sri Raghav

Admin