ಕೊರೊನಾದಿಂದ ತತ್ತರಿಸಿದ ಅಮೆರಿಕಾಗೆ ಮತ್ತೊಂದು ಆಘಾತಕಾರಿ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.22- ಅಗೋಚರ ವೈರಿ ಕೊರೊನಾ ವೈರಸ್ ಅಮೆರಿಕವನ್ನು ಬೆಂಬಿಡದೆ ಕಾಡುತ್ತಿದೆ. ಅಮೆರಿಕದಲ್ಲಿ ಈವರೆಗೆ 44,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 9 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ.

ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ಅಕ್ಷರಶಃ ಕಂಗೆಟ್ಟಿರುವ ಅಮೆರಿಕದಲ್ಲಿ ಈ ವರ್ಷಾಂತ್ಯದ ವೇಳೆಗೆ ಮತ್ತೊಂದು ಸುತ್ತಿನ ವಿನಾಶಕಾರಿ ವೈರಾಣು ದಾಳಿ ಮಾಡಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕಳೆದ 24 ತಾಸುಗಳ ಅವಧಿಯಲ್ಲಿ ಅಮೆರಿಕದಲ್ಲಿ 1,500ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಅಲ್ಲದೆ, ಸುಮಾರು 3,500 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಅಮೆರಿಕದಲ್ಲಿ ಸಾವಿನ ಸರಣಿ ಮುಂದುವರಿಯುವ ಸಾಧ್ಯತೆ ಇದ್ದು, ಇನ್ನು ಎರಡು-ಮೂರು ದಿನಗಳಲ್ಲಿ ಸಾವಿನ ಸಂಖ್ಯೆ 50,000 ದಾಟುವ ಆತಂಕವಿದೆ.

ಕಿಲ್ಲರ್ ವೈರಸ್ ಕೇಂದ್ರ ಬಿಂದು ಎನಿಸಿರುವ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ 18,500ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 2.75 ಲಕ್ಷಕ್ಕೇರಿದೆ.ನ್ಯೂಜೆರ್ಸಿ ನಗರದಲ್ಲೂ ಕೊರೊನಾ ಅಟ್ಟಹಾಸ ಆತಂಕಕಾರಿಯಾಗಿದೆ. ಅಲ್ಲಿ ಈವರೆಗೆ 6,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 80,000 ದಾಟಿದೆ.

ಅಮೆರಿಕದ ಎಲ್ಲ 50 ರಾಜ್ಯಗಳು ಒಂದಿಲ್ಲೊಂದು ರೀತಿಯಲ್ಲಿ ಕೊರೊನಾ ಕಂಟಕದಿಂದ ನರಳುವಂತಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಈ ಹೆಮ್ಮಾರಿಯನ್ನು ನಿಯಂತ್ರಿಸಲು ಹರಸಾಹಸ ಮುಂದುವರಿಸಿದೆ.

ವರ್ಷಾಂತ್ಯದಲ್ಲಿ ಮತ್ತೊಂದು ಭಾರೀ ವಿಪ್ಲವ: ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ಅಕ್ಷರಶಃ ಕಂಗೆಟ್ಟಿರುವ ಅಮೆರಿಕದಲ್ಲಿ ಈ ವರ್ಷಾಂತ್ಯದ ವೇಳೆಗೆ ಮತ್ತೊಂದು ಸುತ್ತಿನ ವಿನಾಶಕಾರಿ ವೈರಾಣು ದಾಳಿ ಮಾಡಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಕೊರೊನಾದ ಎರಡನೆ ಅಲೆ ಎಂದು ಬಣ್ಣಿಸಿರುವ ವಿಜ್ಞಾನಿಗಳು, ಅದು ಈಗಿನ ತೀವ್ರತೆಗಿಂತಲೂ ಘೋರವಾಗಿರಲಿದ್ದು, ವ್ಯಾಪಕ ಸಾವು-ನೋವು ಮತ್ತು ವಿನಾಶಕ್ಕೆ ಕಾರಣವಾಗಲಿದೆ ಎಂದು ಆತಂಕದಿಂದ ನುಡಿದಿದ್ದಾರೆ.

Facebook Comments

Sri Raghav

Admin