BIG NEWS : ಭೂಮಿಗೆ ಏಲಿಯನ್ಸ್ ಎಂಟ್ರಿ..? ಹಾರುವ ತಟ್ಟೆಯ ಅಧಿಕೃತ ವಿಡಿಯೋ ರಿಲೀಸ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಏ.28-ಆತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೂ ದೊಡ್ಡ ಸವಾಲಾಗಿರುವ ಅಪರಿಮಿತ ವೇಗ ಮತ್ತು ಮಾನವಾತೀತ ಶಕ್ತಿಯ ಅಪರಿಚಿತ ಹಾರುವ ವಸ್ತುಗಳು (ಯುಎಫ್‍ಓ ಅಥವಾ ಫ್ಲೈಯಿಂಗ್ ಸಾಸರ್‍ಗಳು ಅಥವಾ ಹಾರುವ ತಟ್ಟೆಗಳು) ಮತ್ತೆ ಬಾನಂಗಳದಲ್ಲಿ ಗೋಚರಿಸಿದ್ದು, ಅಚ್ಚರಿಯೊಂದಿಗೆ ಆತಂಕಕ್ಕೂ ಕಾರಣವಾಗಿದೆ.

ಅಪಾರ ಶಕ್ತಿಯ ಅನ್ಯಗ್ರಹ ಜೀವಿಗಳಿರುವ ಯುಎಫ್‍ಒಗಳು ಅನೇಕಾನೇಕ ವರ್ಷಗಳಿಂದಲೂ ಅಮೆರಿಕದ ಸೇರಿದಂತೆ ವಿಶ್ವದ ಅನೇಕ ಶಕ್ತಿಶಾಲಿ ರಾಷ್ಟ್ರಗಳಿಗೆ ದೊಡ್ಡ ಸವಾಲಾಗಿದೆ. ಹಾರುವ ತಟ್ಟೆಗಳ ರಹಸ್ಯವನ್ನು ನಿಖರವಾಗಿ ಭೇದಿಸಲು ಇಂದಿಗೂ ಕೂಡ ಮಹತ್ವದ ಅಧ್ಯಯನಗಳು ಮತ್ತು ಸಂಶೋಧನೆಗಳು ಮುಂದುವರಿದಿದೆ.

ಈ ಮಧ್ಯೆ, ಅಮೆರಿಕರಕ್ಷನಾ ಇಲಾಖೆ-ಪೆಂಟಗನ್‍ಅನ್‍ಐಡೆಂಟಿಫೈಯ್ಡಿ ಫ್ಲೈಯಿಂಗ್ ಆಬ್ಜೆಕ್ಟ್‍ಗಳು ಗೋಚರಿಸಿದ ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.
ಅಮೆರಿಕ ನೌಕಾಪಡೆಯ ಹಡಗುಗಳು ಸಮುದ್ರದಲ್ಲಿ ಚಲಿಸುತ್ತಿದ್ದಾಗ ಮೂರು ವಿಭಿನ್ನ ಕಾಲಘಟ್ಟಗಳಲ್ಲಿ ಹಾರುವ ತಟ್ಟೆಗಳು ಅತ್ಯಂತ ವೇಗವಾಗಿ ಗಗನದಲ್ಲಿ ಹಾರಿಹೋದ ದೃಶ್ಯಗಳನ್ನು ನೇವಿ ಪೈಲೆಟ್‍ಗಳು ಕ್ಯಾಮೆರಾಕಣ್ಣಿನಲ್ಲಿ ಸೆರೆ ಹಿಡಿದಿದ್ಧಾರೆ.

ಅವುಗಳು ಕಂಡು ಬಂದಕ್ಷಣದಲ್ಲಿಆದ ಅನುಭವಗಳನ್ನು ಸಹ ತಿಳಿಸಿದ್ದಾರೆ. ಈ ಮೂರು ವಿಡಿಯೋಗಳನ್ನು ಪೆಂಟಗನ್ ನಿನ್ನೆ ಬಿಡುಗಡೆ ಮಾಡಿದ್ದು, ಯುಎಫ್‍ಓಗಳ ಬಗ್ಗೆ ಮತ್ತಷ್ಟು ಅಧ್ಯಯನ ಮತ್ತು ಸಂಶೋಧನೆಗಳಿಗೆ ನೆರವಾಗಲಿದೆ.ಅಮೆರಿಕ ಸೇರಿದಂತೆಇತರ ದೇಶಗಳಲ್ಲಿ ಅಗಾಗ ಗೋಚರಿಸಿ ಭಯಾಶ್ಚರ್ಯಗಳಿಗೆ ಕಾರಣವಾಗಿರುವ ಹಾರುವ ತಟ್ಟೆಗಳು ಅಗಾಗ ಭೂಮಿಗೆತಿ ತೀರಾ ಸನಿಹಕ್ಕೆ ಬಂದಿರುವುದನ್ನು ಕ್ಲೋಸ್ ಎನ್‍ಕೌಂಟರ್ ಎಂದು ಕರೆಯಲಾಗುತ್ತದೆ.

ಈ ಹಾರುವ ತಟ್ಟೆಗಳ ರಹಸ್ಯ ಭೇದಿಸಲು ಅಮೆರಿಕದಅಗಾದ ವೇಗದ ಫೈಟ್‍ಜೆಟ್ ವಿಮಾನಗಳು ಅವುಗಳನ್ನು ಬೆನ್ನಟ್ಟಿ ಅಪರಿಮಿತ ವೇಗೋತ್ಕರ್ಷಕ್ಕೆ ಸಾಟಿಯಾಗದೇ ನಿರಾಶೆಯಿಂದ ಹಿಂದಿರುಗಿವೆ.ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಇಂಥ ಫ್ಲೈಯಿಂಗ್ ಸಾಸರ್‍ಗಳಲ್ಲಿ ಅನ್ಯಗ್ರಹ ಜೀವಿಗಳು ಇರುತ್ತಾರೆ.

ಇವರ ಶಕ್ತಿ ಸಾಮಥ್ರ್ಯ ಊಹೆಗೂ ನಿಲುಕದ್ದು, ಇವರನ್ನು ಮಣಿಸಲುಯಾವುದೇದೇಶದ ಪ್ರಬಲ ಮಿಲಿಟರಿಯಿಂದಲೂ ಸಾಧ್ಯವಿಲ್ಲ ಎಂಬ ವಾದಗಳೂ ಸಹ ಈಗಲೂ ಚರ್ಚೆಗೆಗ್ರಾಸವಾಗುತ್ತಲೇಇದೆ.

ಕೊರೊನಾಚಿಕಿತ್ಸೆಗೆ ವಿಶ್ವದ ಬೃಹತ್ ನೌಕಾ ಆಸ್ಪತ್ರೆ…. ಕೊರೊನಾ ದಾಳಿಯಿಂದ ಅಪಾರ ಸಾವು-ನೋವಿನಿಂಸ ಕಂಗೆಟ್ಟಿರುವ ಅಮೆರಿಕ ಈ ವೈರಾಣು ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಸಾಂಕ್ರಾಮಿಕರೋಗದ ಶಂಕಿತರು ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದಅಮೆರಿಕದರಕ್ಷಣಾ ಇಲಾಖೆ ಪೆಂಟಗನ್‍ತನ್ನಯುದ್ಧ ಹಡಗುಗಳನ್ನೇ ನೌಕಾ ಆಸ್ಪತ್ರೆಗಳಾಗಿ ಪರಿವಿರ್ತಿಸಿದೆ.

ಈಗಾಗಲೇ ಯುಎನ್‍ಯುಎಸ್‍ಕಂಫರ್ಟ್ ಮತ್ತು ಮರ್ಸಿ ಎಂಬ ನೇವಿ ಶಿಫ್‍ಗಳು ಅಮೆರಿಕದ ಕರಾವಳಿ ಪ್ರದೇಶಗಳಲ್ಲಿ ಕಾರ್ಯಾರಂಭ ಮಾಡಿದೆ. ಇದು 1,000 ಹಾಸಿಗೆಗೆಳ ಸಾಮಥ್ರ್ಯದ ವಿಶ್ವದ ಬೃಹತ್ ನೌಕಾ ಆಸ್ಪತ್ರೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಹೈಟೆಕ್ ಆಸ್ಪತ್ರೆಗಳಲ್ಲಿರುವ ಸಕಲ ಸೌಲಭ್ಯಗಳೂ ಇಲ್ಲುಂಟು.

 

Facebook Comments

Sri Raghav

Admin