ದೆಹಲಿಯಲ್ಲಿ ಒಂದೇ ವಾರದಲ್ಲಿ 4ನೇ ಅಗ್ನಿ ಆಕಸ್ಮಿಕ, ಮೂವರ ಸಾವು ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.15- ದೆಹಲಿಯಲ್ಲಿ ಮತ್ತೊಂದು ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಮೂವರು ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ. ರಾಜಧಾನಿಯ ಶಾಲಿಮಾರ್ ಬಾಗ್‍ನಲ್ಲಿ ನಿನ್ನೆ ಸಂಜೆ ಸಂಭವಿಸಿದ ಬೆಂಕಿ ದುರಂತದಲ್ಲಿ ತೀವ್ರ ಸುಟ್ಟಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮೃತಪಟ್ಟಿದ್ದಾರೆ.

ಅಸುನೀಗಿದವರನ್ನು ಕಿರಣ್((60), ಸೋಮವತಿ(57) ಹಾಗೂ ಕಮ್ತಾದೇವಿ (80) ಎಂದು ಗುರುತಿಸಲಾಗಿದೆ. ನಾಲ್ವರು ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಶಾಲಿಮಾರ್ ಭಾಗ್ ಪ್ರದೇಶದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಅಗ್ನಿಯ ಕೆನ್ನಾಲಿಗೆಗಳು ಮತ್ತು ದಟ್ಟ ಹೊಗೆ ನಾಲ್ಕು ಅಂತಸ್ತುಗಳ ಕಟ್ಟಡಕ್ಕೆ ವ್ಯಾಪಿಸುತ್ತಿದೆ ಎಂಬ ಸುದ್ದಿ ನಿನ್ನೆ ಸಂಜೆ 6.05ರಲ್ಲಿ ತಿಳಿಯುತ್ತಿದ್ದಂತೆ ಒಂಭತ್ತು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಢ ಏಳು ಜನರನ್ನು ಕಟ್ಟಡದಿಂದ ಹೊರಗೆ ತಂದು ಆಸ್ಪತ್ರೆಗೆ ದಾಖಲಿಸಿದರು.

ಇವರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ಧಾರೆ. ಇದು ಒಂದು ವಾರದಲ್ಲಿ ದೆಹಲಿಯಲ್ಲಿ ಸಂಭವಿಸಿದ ನಾಲ್ಕನೇ ಅಗ್ನಿ ದುರ್ಘಟನೆಯಾಗಿದೆ. ಮುಂಡ್ಕಾ ಪ್ರದೇಶದ ಫ್ಲೈವುಡ್ ಕಾರ್ಖಾನೆಯೊಂದರಲ್ಲಿ ನಿನ್ನೆ 5ರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡು ಅಗ್ನಿ ಕೆನ್ನಾಲಿಗೆಗಳು ಆವರಿಸಿಕೊಂಡಿತ್ತು ಇದು ಸಮೀಪದಲ್ಲಿದ್ದ ಬಲ್ಬ್ ಫ್ಯಾಕ್ಟರಿಗೂ ಆವರಿಸಿತು.

ಸುದ್ದಿ ತಿಳಿದ ಕೂಡಲೇ 20 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಈ ಆಕಸ್ಮಿಕದಲ್ಲಿ ಸಾವು-ನೋವು ಸಂಭವಿಸಿಲ್ಲ. ಆದರೆ ಭಾರೀ ಪ್ರಮಾಣದ ಫ್ಲೈವುಡ್‍ಗಳು ಮತ್ತು ಇತರ ದಾಸ್ತಾನುಗಳು ಸುಟ್ಟು ಬೂದಿಯಾಗಿವೆ.

ಕಳೆದ ಭಾನುವಾರ ದೆಹಲಿ ಝಾನ್ಸಿ ರಸ್ತೆಯಲ್ಲಿರುವ ಅನಾಜ್ ಮಂಡಿಯಲ್ಲಿನ ಬ್ಯಾಗ್ ತಯಾರಿಕಾ ಕಾರ್ಖಾನೆಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ 40ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಅದರ ಮರುದಿನ ದೆಹಲಿಯ ಪೀಠೋಪಕರಣ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಲಕ್ಷಾಂತರ ರೂ. ಮೌಲ್ಯದ ದಾಸ್ತಾನು ಭಸ್ಮವಾಯಿತು.

Facebook Comments

Sri Raghav

Admin