ಇಂಗ್ಲೆಂಡ್ನಲ್ಲೊಂದು ವಿಶಿಷ್ಟ ಹೆಬ್ಬೆಟ್ಟು ಕುಸ್ತಿ ಪಂದ್ಯ..!
ನಿಮಗೆಲ್ಲಾ ತಿಳಿದಿರುವಂತೆ ಇಂಗ್ಲೆಂಡ್ ಭಿನ್ನ-ವಿಭಿನ್ನ ಮತ್ತು ಚಿತ್ರ-ವಿಚಿತ್ರ ಕ್ರೀಡೆಗಳಿಗೆ ಪ್ರಸಿದ್ದ. ಇಂಥ ಆಟಗಳಲ್ಲಿ ಹೆಬ್ಬೆಟ್ಟು ಕುಸ್ತಿ ಪಂದ್ಯವೂ ಒಂದು. ವಾರ್ಷಿಕ ವಲ್ಡ್ ಥಂಬ್ ರೆಸ್ಲಿಂಗ್ ಚಾಂಪಿಯನ್ಶಿಪ್ ಕುರಿತು ಇಲ್ಲೊಂದು ರಿಪೋರ್ಟ್.
ಪೂರ್ವ ಇಂಗ್ಲೆಂಡ್ನ ಸುಪ್ರೋಕ್ನ ಬೆಕ್ಲೆಸ್ನ ಲಾಕ್ ಇನ್ ಪಬ್ನಲ್ಲಿ ಪ್ರತಿ ವರ್ಷ ನಡೆಯುವ ಧಂಬ್ ರೆಸ್ಟಿಂಗ್ ಚಾಂಪಿಯನ್ಶಿಪ್ ವಿಶಿಷ್ಟ ಕ್ರೀಡೆ. ಪುಟ್ಟ ಕುಸ್ತಿ ಅಖಾಡವನ್ನು ಹೋಲುವ ಮರದ ಚೌಕಾಕಾರದ ರಿಂಗ್ನಲ್ಲಿ ಇಬ್ಬರು ಸ್ಪರ್ಧಿಗಳು ಹೆಬ್ಬೆಟ್ಟು ಮೂಲಕ ಸೆಣಸುವ ಆಟವಿದು.
ಪುರುಷರು ಮತ್ತು ಮಹಿಳಾ ವಿಭಾಗಗಳಲ್ಲಿ ನಡೆಯುವ ಪ್ರತ್ಯೇಕ ಪಂದ್ಯಗಳಿಗಾಗಿ ಮೂರು ನಿಮಿಷಗಳ ಕಾಲ ನಿಗದಿಗೊಳಿಸಲಾಗುತ್ತದೆ. ಯಾವ ಸ್ಪರ್ಧಿ ತನ್ನ ಹೆಬ್ಬೆರಳಿನಿಂದ ಎದುರಾಳಿಯ ಹೆಬ್ಬೆಟ್ಟನ್ನು ಬಗ್ಗಿಸಿ ಮಣಿಸುತ್ತಾರೋ ಅವರು ಗೆದ್ದಂತೆ. ಹನ್ನೊಂದನೆ ಥಂಬ್ ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ. 24 ಪ್ರೌಢರು ಮತ್ತು ಎಂಟು ಮಕ್ಕಳಿಗಾಗಿ ಪಂದ್ಯಗಳನ್ನು ಆಯೋಜಿಸಲಾಗಿತ್ತು.
ಪುರುಷರ ಫೈನಲ್ ಪಂದ್ಯದಲ್ಲಿ ಪಾಲ್ ಗೆಲುವು ಸಾಧಿಸಿದರು. ಅಂಡರ್ ದಿ ಥಂಬ್ ಎಂಬ ಅನ್ವರ್ಥನಾಮದ ಅವರು ಸತತ ನಾಲ್ಕನೇ ಬಾರಿ ವಿಶ್ವ ಚಾಂಪಿಯನ್ ಆದರು. ಇವರು ಪ್ರಬಲ ಪ್ರತಿಸ್ಪರ್ಧಿ ಥಂಬ್ಟೇಕರ್ ಅವರನ್ನು ಮಣಿಸಿ ಪ್ರಶಸ್ತಿ ಗಳಿಸಿದರು.
ಮಹಿಳೆಯರ ವಿಭಾಗದಲ್ಲಿ ಜನೆಟ್ ಕೊಲ್ಮ್ಯಾನ್ ಅಲಿಯಾಸ್ ನ್ಯಾನಿ ಥಂಬ್ ವಿಜೇತರಾದರು. ಸುಝಿ ಥಂಬ್ ಎಂಬ ಪ್ರತಿಸ್ಪರ್ಧಿಯನ್ನು ಅವರು ಮಣಿಸಿದರು. ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಜನೆಟ್ ವಿಶ್ವ ಚಾಂಪಿಯನ್ ಆಗಿರುವ ಪಾಲ್ನ ಅತ್ತೆ.