ಕಾರು ಅಪಘಾತ: ಗಾಲ್ಫ್ ಸೂಪರ್ ಸ್ಟಾರ್ ಟೈಗರ್ ವುಡ್ ಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಲಾಸ್‍ಏಂಜಲೀಸ್, ಫೆ.24 (ಪಿಟಿಐ)- ವಿಶ್ವ ಗಾಲ್ಫ್ ಚಾಂಪಿಯನ್ ಸೂಪರ್‍ ಸ್ಟಾರ್ ಟೈಗರ್‍ ವುಡ್ ಅವರು ಚಲಿಸುತ್ತಿದ್ದ ಅತ್ಯಾಧುನಿಕ ಎಸ್‍ಯುವಿ ಕಾರು ಲಾಸ್‍ಏಂಜಲೀಸ್ ಹೊರವಲಯದ ಕಡಿದಾದ ರಸ್ತೆಯ ಮಧ್ಯದ ಡಿವೈಡರ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ವುಡ್ಸ್ ಅವರನ್ನು ಕಾರಿನ ವಿಂಡ್‍ಶೀಲ್ಡ್ ಮೂಲಕ ಹೊರ ತೆಗೆಯಬೇಕಾಗಿ ಬಂದರೆ ಅವರ ಏಜೆಂಟ್‍ನ ಕಾಲು ಮುರಿದಿದೆ. ಅವರು ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ.

ಮಂಗಳವಾರ 45 ವರ್ಷದ ವುಡ್ಸ್ ಅವರು ತಮ್ಮ ಏಜೆಂಟ್ ಚಾಲಕನೊಂದಿಗೆ ಏಕಾಂಗಿ ಕಾರಿನಲ್ಲಿ ತೆರಳುತ್ತಿದ್ದರು. ಕಡಿದಾದ ರಸ್ತೆಯಲ್ಲಿ ರಭಸವಾಗಿ ತೆರಳುತ್ತಿದ್ದ ಎಸ್‍ಯುವಿ ಕಾರು ರಸ್ತೆಯ ಡಿವೈಡರ್‍ಗೆ ಅಪ್ಪಳಿಸಿದೆ. ಚಲಿಸುತ್ತಿದ್ದ ಕಾರು ನಿಯಂತ್ರಣಕ್ಕೆ ಸಿಗದೆ ಮುಂದಿನ ಎರಡು ಲೇನ್‍ಗಳನ್ನು ಮೇಲೆ ಎಗರಿ ಹಲವು ಬಾರಿ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳದವರು ಅಪಘಾತ ಸ್ಥಳಕ್ಕೆ ಆಗಮಿಸಿ ವುಡ್ಸ್ ಅವರನ್ನು ರಕ್ಷಿಸಿದ್ದಾರೆ. ಕಾರಿನ ವಿಂಡ್‍ಶೀಲ್ಡ್ ಗಾಜುಗಳನ್ನು ಹೊಡೆದು ಅವರನ್ನು ಹೊರಗೆಳೆದು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಬೇರೆ ಯಾವುದೇ ವಾಹನ ಭಾಗಿಯಾಗಿಲ್ಲ. ಏರ್‍ಬ್ಯಾಗ್‍ಗಳು ತೆರೆದುಕೊಂಡಿದ್ದು, ಒಳಭಾಗದಲ್ಲಿ ಜಖಂ ಆಗದೆ ವುಡ್ಸ್ ಅವರನ್ನು ಸುರಕ್ಷಿತವಾಗಿರಿಸಲು ಅನುಕೂಲವಾಗಿದೆ. ಆದ್ದರಿಂದ ಅಪಘಾತದಿಂದ ಬದುಕುಳಿಯಲು ನೆರವಾಗಿದೆ ಎಂದು ಲಾಸ್‍ಏಂಜಲೀಸ್ ಕೌಂಟಿ ಶೆರಿಫ್ ಅಲೆಕ್ಸ್ ವಿಲ್ಲಾನುಯೆವಾ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವುಡ್ಸ್ ಅವರಿಗೆ ಎಷ್ಟು ಮಟ್ಟಿಗೆ ತೊಂದರೆಯಾಗಿದೆ ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ತಪಾಸಣೆಯಲ್ಲಿ ಅವರು ಮದ್ಯ ಅಥವಾ ಇನ್ನಿತರ ವಸ್ತುಗಳನ್ನು ಸೇವಿಸಿರುವ ಅಥವಾ ಬಳಸಿರುವ ಚಿಹ್ನೆಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೆರಿಫ್ ಡೆಪ್ಯೂಟಿ ಕಾರ್ಲೋಸ್ ಗೋನ್ಜಾಲೆಜ್ ಅವರು, ಕಾರು ಎಷ್ಟು ವೇಗವಾಗಿ ಚಲಿಸುತ್ತಿತ್ತು ಎಂಬುದನ್ನು ಇದುವರೆಗೂ ತಿಳಿದುಬಂದಿಲ್ಲ. ಆದರೆ, ದುರಂತ ಲಾಸ್‍ಏಂಜಲೀಸ್ ಉಪನಗರ ಮೂಲಕ ಹಾದು ಹೋಗುವ ಎರಡು ಪಥದ ರಸ್ತೆಯ ಇಳಿಯುವಿಕೆಯಲ್ಲಿ ಸಂಭವಿಸಿದೆ.ಅಪಘಾತದಲ್ಲಿ ವುಡ್ಸ್ ಅವರು ಜೀವಂತದಿಂದ ಹೊರಬರಲು ಮಾತ್ರ ಸಾಧ್ಯವಾಗಿದೆ. ಅವರು ಅದೃಷ್ಟಶಾಲಿ, ಅವರ ಏಜೆಂಟ್ ಕಾಲು ಮುರಿದಿದೆ ಎಂದು ಮಾತ್ರ ತಿಳಿದು ಬಂದಿದೆ ಎಂದಿದ್ದಾರೆ.

Facebook Comments