ತಿಹಾರ್ ಜೈಲಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ, ಮೂವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.25- ತಿಹಾರ್ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿದ್ದು, ಮೂವರು ಖೈದಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಶನಿವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಗೆ ಭೇಟಿ ನೀಡಿದ ಬಳಿಕ ಪೊಲೀಸರು ಮೆಡಿಕೋ ಲಿಗಲ್ ಕೇಸು (ಎಂಎಲ್‍ಸಿಸ್) ಪ್ರಕರಣ ದಾಖಲಿಸಿದ್ದಾರೆ.

ಗಲಾಟೆಯಲ್ಲಿ ಪಿಂಕು (24), ಸುನೀಲ್ ಶರಾವತ್ (32), ಸನ್ನಿ (32) ಗಾಯಗೊಂಡಿದ್ದಾರೆ. ಚೂಪಾದ ಆಯುಧಗಳಿಂದ ಹಲ್ಲೆ ಮಾಡಿದ್ದರಿಂದ ಖೈದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುನೀಲ್, ಪಿಂಕುವನ್ನು ಸಫ್ದರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸನ್ನಿ ಹೇಳಿಕೆಯನ್ನು ದಾಖಲಿಸಲಾಗಿದೆ.

ಬಂಧಿಖಾನೆಯ ಸಂಖ್ಯೆ 1ರಲ್ಲಿ ನಡೆದ ಘಟನೆಗೆ ಜೈಲಿನ ಅಧಿಕ್ಷಕರು ದೂರು ನೀಡಿದ್ದಾರೆ. ಆರೋಪಿಗಳಾದ ರೋಹಿತ್ ಕಪೂರ್, ರಾಜೇಶ್, ಸುನೀಲ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Facebook Comments