ತಿಲಕ್, ಅಜಾದ್ ಜನ್ಮ ಜಯಂತಿ : ಸ್ವಾತಂತ್ರ್ಯ ಹೋರಾಟಗಾರರಿಗೆ ಮೋದಿ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.23-ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಗ್ರಮಾನ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ್ ಅಜಾದ್ ಅವರ ಜನ್ಮ ದಿನವಿಂದು. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ತಿಲಕ್ ಮತ್ತು ಅಜಾದ್ ಅವರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ.

ತಿಲಕ್ ಅವರ 163ನೇ ಜನ್ಮ ಜಯಂತಿ ಪ್ರಯುಕ್ತ ಮೋದಿ ಸ್ವಾತಂತ್ರ್ಯ ಹೋರಾಟಗಾರರ ಸೇವೆಯನ್ನು ಸ್ಮರಿಸಿದ್ದಾರೆ. ಇವರ ಕೊಡುಗೆಯನ್ನು ದೇಶ ಸದಾ ನೆನೆಪಿಸಿಕೊಳ್ಳುತ್ತದೆ ಎಂದು ಮೋದಿ ಟ್ವೀಟ್‍ನಲ್ಲಿ ಹೇಳಿದ್ದಾರೆ.

ತಿಲಕ್ ಅವರ ತಮ್ಮ ಜೀವನವನ್ನು ಪೂರ್ಣ ಸ್ವರಾಜ್ ಸಾಕಾರಕ್ಕಾಗಿ ಸಮರ್ಪಿಸಿಕೊಂಡಿದ್ದರು ಎಂದು ಪ್ರಧಾನಿ ಹಿಂದಿಯಲ್ಲಿ ಟ್ವಿಟ್ ಮಾಡಿದ್ದಾರೆ. ಮಹಾರಾಷ್ಟ್ರದ ಚಿಕಾಲಿಯಲ್ಲಿ 1856, 23ನೇ ಜುಲೈನಲ್ಲಿ ತಿಲಕ್ ಜನಿಸಿದ್ದರು.

ಚಂದ್ರಶೇಖರ್ ಅಜಾದ್ ಅವರನ್ನು ನಿರ್ಭೀತ ಮತ್ತು ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸಿರುವ ಪ್ರಧಾನಿ, ಅವರ ಧೈರ್ಯ ಮತ್ತು ತ್ಯಾಗ ಭಾರತೀಯರೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಗುಣಗಾನ ಮಾಡಿದ್ದಾರೆ.

ಅಜಾದ್ 1906ರಲ್ಲಿ ಇದೇ ದಿನದಂದು ಮಧ್ಯಪ್ರದೇಶದ ಭವರ್‍ದಲ್ಲಿ ಜನಿಸಿದ್ದರು. ಬ್ರಿಟಿಷರ ದಬ್ಬಾಳಿಕೆ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಅಜಾದ್ ಬಲಿ ಕೊಟ್ಟು ಹುತಾತ್ಮರಾದರು.

Facebook Comments