ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ ಅರ್ಜುನ್ ತೆಂಡೂಲ್ಕರ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.15- ಈಗಾಗಲೇ ಕ್ರಿಕೆಟ್‍ನಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಈಗ ದೊಡ್ಡಮಟ್ಟದ ಆಟಕ್ಕೆ ಕನಸು ಹೊತ್ತು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

16 ವರ್ಷದೊಳಗೆ ಭಾರತ ಕ್ರಿಕೆಟ್‍ನಲ್ಲಿ ಸ್ಥಾನ ಪಡೆದಿದ್ದ ಅರ್ಜುನ್ ಈಗ ತಂದೆ ಸೂಚಿಸುವ ಆರೋಗ್ಯ ರಕ್ಷಣೆ ಮತ್ತು ದೇಹದಾಢ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಿದ್ದಾನೆ. ಅಪ್ಪ ಬ್ಯಾಟ್ಸ್‍ಮನ್ ಆಗಿ ಹೆಚ್ಚು ಸಾಧನೆ ಮಾಡಿದ್ದರೆ, ಮಗ ಬೌಲಿಂಗ್‍ನಲ್ಲಿ ಸಾಧನೆ ಮಾಡಲು ಹೊರಟಿದ್ದಾನೆ.

ಆಶ್ಚರ್ಯವಾದರೂ ಮುಂದೊಂದು ದಿನ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುವ ಎಲ್ಲ ಲಕ್ಷಣಗಳೂ ಇವೆ. ಅದಕ್ಕೂ ಮುನ್ನ ಮಹಾರಾಷ್ಟ್ರ ತಂಡದಲ್ಲಿ ರಣಜಿ ಪಂದ್ಯಗಳಲ್ಲಿ ಆಡಲು ತರಬೇತಿ ಪಡೆಯುತ್ತಿದ್ದಾರೆ.

ಹೊಸ ಸುದ್ದಿ ಎಂದರೆ ಅರ್ಜುನ್ ಐಪಿಎಲ್‍ನಲ್ಲಿ ಅಂತಾರಾಷ್ಟ್ರೀಯ ಆಟಗಾರರ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲು ಪುಟ್ಟ ಮಗುವಾಗಿ ಅಪ್ಪ ಆಡುವ ಕೆಲವು ಪಂದ್ಯಗಳನ್ನು ನೋಡುವ ವೇಳೆ, ಬೆಳೆದ ನಂತರ ಮೈದಾನದಲ್ಲಿ ಆಡುವ ವೇಳೆ ಹಲವು ದಿಗ್ಗಜ ಕ್ರಿಕೆಟಿಗರ ಜತೆ ಕಾಣಿಸಿಕೊಂಡು ಶಹಭಾಷ್ ಗಿರಿ ಪಡೆಯುವುದು ಮಾಮೂಲು.

ಆದರೆ, ಈಗ ಪ್ರಯಾಸ ಪಟ್ಟು ಅಪ್ಪನಿಗೆ ತಕ್ಕ ಮಗನಾಗಬೇಕೆಂಬ ಹೆಬ್ಬಯಕೆಯಿಂದ ಕ್ರಿಕೆಟ್‍ನಲ್ಲೇ ತನ್ನ ಮುಂದಿನ ಗುರಿ ಹೊಂದುವ ಆಲೋಚನೆಯಲ್ಲಿ ದುಬೈನಲ್ಲೀಗ ಬೀಡು ಬಿಟ್ಟಿರುವ ಮುಂಬೈ-ಇಂಡಿಯನ್ಸ್ ಆಟಗಾರರ ಜತೆ ಬೆರೆಯುತ್ತಿದ್ದಾನೆ.

ಇಷ್ಟೇ ಅಲ್ಲದೆ ನೆಟ್ಸ್‍ಗಳಲ್ಲಿ ಬ್ಯಾಟ್ಸ್‍ಮನ್‍ಗಳಿಗೆ ಬೌಲಿಂಗ್ ಕೂಡ ಮಾಡುತ್ತಿದ್ದು, ಎಲ್ಲರ ಕಣ್ಣುಗಳನ್ನೂ ಉಬ್ಬೇರುವಂತೆ ಮಾಡಿದೆ.
ಈಗಾಗಲೇ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Facebook Comments

Sri Raghav

Admin