ವಿಚ್ಛೇದನ ವಿಚಾರ ಕೈಬಿಟ್ಟು ಒಂದಾದ ಎರಡು ಜೋಡಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು, ಅ.2- ತಿಪಟೂರು ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ ಒಟ್ಟು 4390 ಪ್ರಕರಣಗಳು ಇತ್ಯರ್ಥವಾಗಿದ್ದು, ವಿಚ್ಛೇದನ ಹಂತಕ್ಕೆ ತಲುಪಿದ್ದ ಎರಡು ಜೋಡಿಗಳನ್ನು ಒಂದು ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.

ನಗರದ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ ಕೌಟುಂಬಿಕ ಪ್ರಕರಣಗಳು, ಆಸ್ತಿ ವಿಚಾರಕ್ಕೆ ಸಂಬಂಸಿದ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಅಪಘಾತ, ವಿಮೆಗೆ ಸಂಬಂಸಿದ ಪ್ರಕರಣಗಳು ಸೇರಿದಂತೆ ಇತರೆ ಒಟ್ಟು 4497 ಪ್ರಕಣಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಒಟ್ಟು 4390 ಪ್ರಕರಣಗಳಿ ಇತ್ಯರ್ಥಗೊಂಡಿದೆ.

ಪ್ರಮುಖವಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಎಂಸಿ ಪ್ರಕರಣ ಅಂದರೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಗಳನ್ನು ಒಂದು ಮಾಡುವ ಕಾರ್ಯ ಯಶಸ್ವಿಯಾಗಿದೆ. ಇದಕ್ಕೆ ಪ್ರಕರಣಗಳ ವಕೀಲರಾದ ಸಿ.ವೇಣು, ಎಚ್.ಎಲ್.ಸುಧಾಕರ್, ಭರತ್ ರಾಜ್ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ನ್ಯಾಯಾೀಶರು ಪ್ರಶಂಸಿಸಿದ್ದಾರೆ.

Facebook Comments

Sri Raghav

Admin