ಭಾರೀ ಗಾತ್ರದ ಕಲ್ಲು ತುಂಬಿದ್ದ ಟಿಪ್ಪರ್ ವಾಹನ ಬ್ರೇಕ್‍ಫೇಲ್, ಚಾಲಕ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

ದಾಬಸ್‍ಪೇಟೆ, ಜೂ.19-ಸೋಂಪುರ ಹೋಬಳಿಯ ಮಾಕೆನಹಳ್ಳಿ ಗ್ರಾಮದಲ್ಲಿ ನಡೆಯುವ ಜಲ್ಲಿ ಕ್ರಷರ್‍ನಲ್ಲಿ ಟಿಪ್ಪರ್ ವಾಹನವೊಂದು ಭಾರೀ ಗಾತ್ರದ ಕಲ್ಲನ್ನು ತುಂಬಿಕೊಂಡು ಹೋಗುವಾಗ ಬ್ರೇಕ್ ಫೇಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಾಕೇನಹಳ್ಳಿ ಗ್ರಾಮ ಪಾಸ್ಟ್‍ವೆಲ್ ಸ್ಟೋನ್ ಸ್ಯಾಂಡ್ ಜಲ್ಲಿಕ್ರಷರ್‍ನಲ್ಲಿ ಸುಮಾರು 16 ರಿಂದ 20 ಟನ್ ತೂಕದ ಕಲ್ಲನ್ನು ತುಂಬಿಕೊಂಡು ಹೋಗುವಾಗ ಸಣ್ಣದಾದ ರಸ್ತೆಯಲ್ಲಿ ಟಿಪ್ಪರ್ ಮುಂದಕ್ಕೆ ಹೋಗದೆ ಬ್ರೇಕ್ ಫೇಲಾಗಿ ಹಿಂದಕ್ಕೆ ಹೋಗಿ ಸುಮಾರು 40 ಅಡಿ ಆಳದ ಹಳ್ಳ ಬಿದ್ದಿದೆ.

ಈ ವೇಳೆ ವಾಹನದ ಚಾಲಕ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ದಾಬಸ್‍ಪೇಟೆ ಫೋಲಿಸರು ಪ್ರಕರಣಮ  ದಾಖಲಿಸಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ