ಹಳದಿ ಹಲ್ಲಿನ ಸಮಸ್ಯೆಗೆ ಇಲ್ಲಿದೆ ಪವರ್ ಫುಲ್ ಮನೆಮದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಹಳದಿ ಹಲ್ಲು ಎಲ್ಲರ ಎದುರು ಸಾಕಷ್ಟು ಮುಜುಗರ ತರಬಲ್ಲದ್ದು, ಇಡೀ ನಿಮ್ಮ ವ್ಯಕ್ತಿತ್ವ ಹಾಳು ಮಾಡಬಹುದು ಅದ್ಭುತವಾದ ನಗುವನ್ನು ಹೊಂದಿರಲು ನೀವು ಸುಂದರವಾದ ದಂತಪಂಕ್ತಿಗಳನ್ನು ಹೊಂದಿರಬೇಕು. ಆದರೆ ಈ ಸುಂದರವಾದ ಹಲ್ಲಿಗಾಗಿ ನೀವೇನು ಮಾಡಬೇಕು ಗೊತ್ತೇ? ನಿಜವಾಗಿ ಕೂಡ ಹೊಳೆಯುವ ಹುಳುಕಿಲ್ಲದ ಹಲ್ಲನ್ನು ಪಡೆಯುವ ಇಚ್ಛೆ ಯಾರಿಗಿರುವುದಿಲ್ಲ ಹೇಳಿ.

ಹಲ್ಲುಗಳನ್ನು ಸುಂದರಗೊಳಿಸುವ ಸಂದರ್ಭದಲ್ಲಿ ಬಾಯಿಯ ಸಂಪೂರ್ಣ ಆರೋಗ್ಯದೆಡೆಗೆ ನೀವು ಗಮನವನ್ನು ಹರಿಸಬೇಕಾಗುತ್ತದೆ. ಬಾಯಿಯ ಆರೋಗ್ಯಕ್ಕಾಗಿ ದಿನಕ್ಕೆರಡು ಬಾರಿ ನೀವು ಹಲ್ಲುಜ್ಜಬೇಕು ಮತ್ತು ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು. ಪ್ರತೀ ತಿಂಗಳು ಬಾಯಿಯ ಮತ್ತು ಹಲ್ಲುಗಳ ಪರಿಶೀಲನೆಗಾಗಿ ದಂತವೈದ್ಯರನ್ನು ಕಾಣಬೇಕು.

ಮನೆಯಲ್ಲೇ ನೈಸರ್ಗಿಕವಾಗಿ ಹಲ್ಲುಗಳ ಕಾಳಜಿಯನ್ನು ಮಾಡಿಕೊಳ್ಳುವುದರ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನು ನೀವು ಅನುಸರಿಸಬೇಕು. ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಿ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು ಇದು ಪ್ರತೀ ಸಲ ನೀವು ಆಹಾರ ಸೇವಿಸಿದ ಸಮಯದಲ್ಲಿ ಅನುಸರಿಸಬೇಕು.

ವಂಶವಾಹಿನಿ, ಆಹಾರ, ಹಲ್ಲಿನ ಸಮಸ್ಯೆ ಹಾಗೂ ವಯಸ್ಸಾದಂತೆಯೂ ಹಲ್ಲಿನ ಬಣ್ಣ ಬದಲಾಗಬಹುದು. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ನಿಮ್ಮ ಹಲ್ಲನ್ನು ಬೆಳ್ಳಗೆ ಮಾಡಿಕೊಳ್ಳಬಹುದು.

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ : ಹಲ್ಲಿನಿಂದ ಹಳದಿ ಬಣ್ಣವನ್ನು ಹೋಗಲಾಡಿಸಲು, ಈ ಪರಿಹಾರ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಟೂತ್ ಪೇಸ್ಟ್‎ನಲ್ಲಿ ಇದನ್ನು ಉದುರಿಸಿಕೊಳ್ಳಿ ಮತ್ತು ಹಲ್ಲುಗಳನ್ನು ಉಜ್ಜಿ ಅಥವಾ ಬೇಕಿಂಗ್ ಸೋಡಾ ಮತ್ತು ನೀರನ್ನು ಬಳಸಿ ಪೇಸ್ಟ್ ತಯಾರಿಸಿಕೊಂಡು ಇದನ್ನು ನಿಮ್ಮ ಹಲ್ಲುಗಳಿಗೆ ಉಜ್ಜಿ. ನಿಮ್ಮ ಬಾಯಿಯನ್ನು ತೊಳೆದುಕೊಂಡ ನಂತರ ಫಲಪ್ರದ ಪರಿಣಾಮ ನಿಮಗುಂಟಾಗುತ್ತದೆ.

ನಿಂಬೆಹಣ್ಣ: ನಿಂಬೆಹಣ್ಣು ಹಲ್ಲು ಬೆಳ್ಳಗಾಗಲು ಸಹಕಾರಿ. ನಿಂಬು ಸಿಪ್ಪೆಯಿಂದ ಹಲ್ಲುಜ್ಜಬೇಕು. ಅಥವಾ ನಿಂಬೆ ರಸವನ್ನು ನೀರಿನೊಂದಿಗೆ ಬೆರಸಿ ಬಾಯಿ ಮುಕ್ಕಳಿಸುತ್ತ ಬಂದರೆ ಹಲ್ಲಿನ ಹಳದಿ ಬಣ್ಣ ತೊಲಗಿ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.

ಉಪ್ಪು :  ಹಲವಾರು ಯುಗಗಳಿಂದ ಹಲ್ಲುಗಳನ್ನು ಬಿಳಿಯಾಗಿಸಲು ಉಪ್ಪನ್ನು ಬಳಸಲಾಗುತ್ತಿದೆ. ನಿಮ್ಮ ಟೂತ್ ಪೇಸ್ಟ್‎ನೊಂದಿಗೆ ಕೂಡ ಇದನ್ನು ಬಳಸಿಕೊಳ್ಳಬಹುದಾಗಿದೆ. ಉಪ್ಪು ನಿಮ್ಮ ಹಲ್ಲುಗಳನ್ನು ಮಾತ್ರ ಬಿಳಿಯಾಗಿಸದೇ ದಂತಕುಳಿ ಸಮಸ್ಯೆಗೂ ಉತ್ತಮ ಪರಿಹಾರವಾಗಿದೆ. ಮನೆಯಲ್ಲಿ ಇದನ್ನು ಪ್ರಯತ್ನಿಸಿ.

ಎಳ್ಳಿನ ಬೀಜಗಳು : ಎಳ್ಳಿನ ಬೀಜಗಳು ಹಲ್ಲಿನ ಹಳದಿ ಕಲೆ ನಿವಾರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದುದು. ಎಳ್ಳನ್ನು ಕೊಂಚ ಬಿರುಸಾಗಿ ಹುಡಿಮಾಡಿಟ್ಟುಕೊಳ್ಳಿ. ನಂತರ ಈ ಹುಡಿಯನ್ನು ಬಳಸಿ ಹಲ್ಲುಜ್ಜಿ. ನಿಮ್ಮ ಹಲ್ಲಿನಿಂದ ಕರೆ ಮಾಯವಾಗಿ ಫಳಫಳನೆ ಹೊಳೆಯುತ್ತದೆ.

ಸ್ಟ್ರಾಬೆರ್ರಿ: ಸ್ಟ್ರಾಬೆರ್ರಿ ಕೂಡ ಹಲ್ಲು ಬೆಳ್ಳಗಾಗಲು ಸಹಕಾರಿ. ದಿನ ಬಿಟ್ಟು ದಿನ ಸ್ಟ್ರಾಬೆರ್ರಿ ಹಣ್ಣನ್ನು ಸಣ್ಣಗೆ ನುರಿದು, ಪೇಸ್ಟ್ ಜೊತೆ ಬ್ರೆಶ್ ಮಾಡಿ. ತುಳಸಿ ಎಲೆಗಳನ್ನು ಪೇಸ್ಟ್ ರೀತಿಯಲ್ಲಿ ಬಳಸಬಹುದು. ಅವು ಹಲ್ಲನ್ನು ಬೆಳ್ಳಗೆ ಮಾಡುತ್ತವೆ.

ಕಿತ್ತಳೆ: ಕಿತ್ತಳೆ ಬಾಯಿಯಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಹೊಂದಿದ್ದು, ಹಲ್ಲಿನ ಬಣ್ಣ ಬದಲಾಗುವುದನ್ನು ತಪ್ಪಿಸುತ್ತದೆ. ಒಂದು ವಾರಕ್ಕೆ ಮೂರು ಬಾರಿ ಕಿತ್ತಳೆ ಸಿಪ್ಪೆಯಿಂದ ಹಲ್ಲನ್ನು ಸ್ವಚ್ಛಗೊಳಿಸಿಕೊಂಡರೆ ಪರಿಣಾಮಕಾರಿ.

ಕಹಿ ಬೇವು: ಕಹಿ ಬೇವು ಒ0ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ0ದು ಅಥವಾ ಎರಡು ಹನಿಗಳಷ್ಟು ಲಿ0ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ0ದ ನಿಮ್ಮ ಹಳದಿ ದ0ತಪ0ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ0ಶವು ಗಮನಾರ್ಹವಾಗಿ ಕ0ಡುಬರುವ0ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ0ದು ಬಾರಿ ಕೈಗೊಳ್ಳಿರಿ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ